ETV Bharat / state

ಅತ್ಯಾಚಾರಿಗಳಿಗೆ ಜನನಾಂಗ ಕತ್ತರಿಸುವ ಶಿಕ್ಷೆ ನೀಡಿ: ಬಸವ ಪ್ರಕಾಶ ಸ್ವಾಮೀಜಿ - Punishment for genital cutting

ಇತ್ತೀಚಿಗೆ ಮಾಗಡಿಯಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೂಡಲ‌ ಸಂಗಮದ ಬಸವ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ, ಅತ್ಯಾಚಾರಿಗಳಿಗೆ ಕಠಿಣ ರೀತಿಯ ಶಿಕ್ಷೆ ನೀಡಬೇಕು, ಅಂತಹವರಿಗೆ ಜನನಾಂಗ ಕತ್ತರಿಸುವ ಶಿಕ್ಷೆ ವಿಧಿಸಬೇಕು ಎಂದಿದ್ಧಾರೆ.

Basava prakasha swamyji
ಬಸವ ಪ್ರಕಾಶ ಸ್ವಾಮೀಜಿ
author img

By

Published : Oct 15, 2020, 6:02 PM IST

ಧಾರವಾಡ: ಮಾಗಡಿ ತಾಲೂಕಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳ ಜನನಾಂಗ ಕತ್ತರಿಸುವ ಶಿಕ್ಷೆ ನೀಡುವಂತೆ ಬಾಗಲಕೋಟೆ ಕೂಡಲ‌ ಸಂಗಮದ ಬಸವ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಬಂಧಿಸೋದು, ಜಾಮೀನು ಕೊಡುವುದು ಆಗಬಾರದು. ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವ ಕಾನೂನು ಬರಬೇಕು. ಆಗ ಮಾತ್ರ ಭಾರತದಲ್ಲಿ ಅತ್ಯಾಚಾರ ಕಡಿಮೆ ಆಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಕೂಡಲ‌ ಸಂಗಮದ ಬಸವ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ

‘ತುಂಡು ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ’

ಹೆಣ್ಣು ಮಕ್ಕಳು ಉಡುಗೆ ತೊಡುಗೆ ಬಗ್ಗೆಯೂ ಕಾಳಜಿ ವಹಿಸಬೇಕು. ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ತಲೆ ಮೇಲೆ ಸೆರಗು ಹಾಕಿಕೊಂಡು ಯುದ್ಧ ಮಾಡಿದ್ದಾರೆ. ಆದರೆ ನಮ್ಮ ಯುವತಿಯರು ಹೊಸ ವರ್ಷ ಬಂದರೆ ಎಂಜಿ, ಬ್ರಿಗೆಡ್ ರೋಡ್‌ನಲ್ಲಿ ಇರುತ್ತಾರೆೆ. ತುಂಡು ಬಟ್ಟೆ ಹಾಕಿಕೊಂಡು ಕುಣಿಯುತ್ತಾರೆ. ಇದರಿಂದ ಪುರುಷರ ಮನುಷ್ಯ ಪ್ರಚೋದನೆಗೊಳಗಾಗಿ ಕೆಲ ಸಂದರ್ಭಗಳಲ್ಲಿ ಅತ್ಯಾಚಾರ ಆಗುತ್ತಿವೆ. ಸ್ತ್ರೀಯರಿಗೆ ಮೊದಲು ತಾವು ಹೇಗೆ ಇರಬೇಕು ಅನ್ನೋದು ಗೊತ್ತಿರಬೇಕಲ್ವ ಉಡುಗೆ, ತೊಡುಗೆಯಲ್ಲಿ ಎಚ್ಚೆತ್ತುಕೊಳ್ಳಬೇಕಲ್ವ ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.