ETV Bharat / state

ಸಿ ಟಿ ರವಿ ಲೋಡ್ ಶೆಡ್ಡಿಂಗ್ ಆರೋಪಕ್ಕೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು

author img

By ETV Bharat Karnataka Team

Published : Aug 22, 2023, 1:51 PM IST

Updated : Aug 22, 2023, 2:44 PM IST

''ಸರ್ಕಾರ ಬಂದು ಕೆಲವು ತಿಂಗಳಾಗಿದ್ದು, ಗ್ಯಾರಂಟಿ ಕೊಡುವವರೆಗೂ ಸಮಾಧಾನ ಇಲ್ಲ. ಮಳೆಯಾಗದ ಕಾರಣಕ್ಕೆ ಯಾವ ಅಣೆಕಟ್ಟೆಗಳು ತುಂಬಿಲ್ಲ. ಸತ್ಯ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು'' ಎಂದು ಸಿ ಟಿ ರವಿ ಲೋಡ್ ಶೆಡ್ಡಿಂಗ್ ಆರೋಪಕ್ಕೆ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು.

Minister Shivraj Tandagi
ಸಿ.ಟಿ. ರವಿ ಲೋಡ್ ಶೆಡ್ಡಿಂಗ್ ಆರೋಪಕ್ಕೆ ಸಚಿವ ಶಿವರಾಜ್ ತಂಗಡಗಿ ತಿರಿಗೇಟು
ಸಿ ಟಿ ರವಿ ಲೋಡ್ ಶೆಡ್ಡಿಂಗ್ ಆರೋಪಕ್ಕೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು

ಧಾರವಾಡ: ಲೋಡ್‌ಶೆಡ್ಡಿಂಗ್ ಬಗ್ಗೆ ಮಾಜಿ ಶಾಸಕ ಸಿ ಟಿ ರವಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಸಿ ಟಿ ರವಿ ಅವರಿಗೆ ಸಮಾಧಾನವೇ ಇಲ್ಲ, ಸರ್ಕಾರ ಬಂದು ಕೆಲವೇ ತಿಂಗಳಾಗಿದ್ದು, ಈಗಾಗಲೇ ಗ್ಯಾರಂಟಿ ಕೊಡುತ್ತಿದ್ದೇವೆ. ಗ್ಯಾರಂಟಿ ಕೊಡುವವರೆಗೂ ಸಮಾಧಾನ ಇಲ್ಲ. ಮಳೆಯಾಗದ ಕಾರಣಕ್ಕೆ ಯಾವ ಅಣೆಕಟ್ಟೆಗಳೂ ತುಂಬಿಲ್ಲ. ಸತ್ಯ ತಿಳಿದುಕೊಂಡು ಮಾತನಾಡುವುದು ಯೋಗ್ಯವಾಗುತ್ತದೆ'' ಎಂದು ಹರಿಹಾಯ್ದರು.

ಒಂದೆರಡು ವರ್ಷ ಬಿಜೆಪಿ ಸಮಾಧಾನದಿಂದ ಇರಬೇಕು: ''ಅವರು ಮನಸ್ಸಿಗೆ ಬಂದಂತೆ ಮಾತನಾಡಬಾರದು. ಲೋಡ್ ಶೆಡ್ಡಿಂಗ್ ಒಂದೆರಡು ದಿನ ಹೆಚ್ಚು ಕಮ್ಮಿ ಆಗೋದೆ. ಒಂದೆರಡು ಸಲ ಆದ ತಕ್ಷಣ ಸರ್ಕಾರವನ್ನು ಹೊಣೆ ಮಾಡುವುದಾ? ಐದು ವರ್ಷ ಇವರೇನು ಮಾಡಿದರು. ಮೋದಿ ಅವರನ್ನು ಗಲ್ಲಿ ಗಲ್ಲಿ, ಬೀದಿ ಬೀದಿ ತಿರುಗಿಸಿದರು. ಆದರೂ 66 ಸ್ಥಾನಕ್ಕೆ ನಿಂತರು. ಒಂದೆರಡು ವರ್ಷ ಬಿಜೆಪಿ ಸಮಾಧಾನದಿಂದ ಇರಬೇಕು. ಐದು ವರ್ಷದಲ್ಲಿ ವರ್ಷಕ್ಕೊಂದು ಗ್ಯಾರಂಟಿ ಅಂತಾ ಇವರು ತಿಳಿದಿದ್ದರು. ಮೂರು ತಿಂಗಳಲ್ಲಿ ಮೂರು ಗ್ಯಾರಂಟಿ ಕೊಟ್ಟಿದೇವೆ. ನಾಲ್ಕನೇ ಗ್ಯಾರಂಟಿ ಕೊಡಲು ಹೊರಟಿದ್ದೇವೆ. ಹೀಗೆ ಆದರೆ, ಮುಂದೆ ಹೇಗೆ ಅನ್ನೋ ಚಿಂತೆ ಕಾಡುತ್ತಿದೆ'' ಎಂದರು.

''ಮುಂದೆ ರಾಜಕೀಯ ಜೀವನ ಹೇಗೆ ಎಂಬ ಆತಂಕ ಶುರುವಾಗಿದೆ. ಅವರ ಪಕ್ಷದಲ್ಲಿನ ಎಂಎಲ್‌ಎಗಳೇ ಈಗ ಹೊರಗೆ ಹೊರಟಿದ್ದಾರೆ. ಬಿಜೆಪಿ ಖಾಲಿಯಾದರೆ ಮುಂದೆ ಹೇಗೆ ಎಂಬ ಟೆನ್ಷನ್ ಇದೆ. ಆ ಟೆನ್ಷನ್‌ದಲ್ಲಿ ಸಿ ಟಿ ರವಿ ಮಾತನಾಡುತ್ತಿದ್ದಾರೆ. ಸಿ ಟಿ ರವಿ ಬಹಳ ಟೆನ್ಷನ್ ತಗೋಬೇಡಿ ವರ್ಷ, ಎರಡು ವರ್ಷ ಆದ ಮೇಲೆ ಮಾತನಾಡಿ'' ಎಂದು ವ್ಯಂಗ್ಯವಾಡಿದರು.

ಅಪರೇಷನ್ ಹಸ್ತಕ್ಕೆ ನವರಂಗಿ ಆಟ ಎಂದು ಆರೋಪ ವಿಚಾರಕ್ಕೆ ಮಾತನಾಡಿದ ಅವರು, ''ಸಿ ಟಿ ರವಿ ಆರೋಪಕ್ಕೆ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದಾರೆ. ಇವರು ಹಿಂದೆ ಅಪರೇಷನ್ ಮಾಡಿದ್ದರಲ್ಲವಾ? ಆಗ ನಾಚಿಕೆ, ನವರಂಗಿ ಆಟ ಕಾಣಲಿಲ್ಲವಾ? ಈಗ ನವರಂಗಿ ಆಟ ಕಾಣುತ್ತಿದೆಯಾ'' ಎಂದು ಪ್ರಶ್ನಿಸಿದ್ದಾರೆ.

''ನಮಗೆ ಸರ್ಕಾರ ಬೀಳುತ್ತೆಂಬ ಚಿಂತೆ ಇಲ್ಲ. ಅಲ್ಲಿರೋ ಶಾಸಕರೇ ನಮ್ಮಲ್ಲಿ ಬರುತ್ತಿದ್ದಾರೆ. ಬಿಜೆಪಿಯಲ್ಲಿದ್ದರೆ ಮುಂದೆ ಏನೂ ಆಗುವುದಿಲ್ಲ ಎಂಬುದು ತಿಳಿದಿದೆ. ಅದಕ್ಕಾಗಿ ನಮ್ಮ ತತ್ವ, ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ. ಎಷ್ಟು ಜನ ಬರುತ್ತಿದ್ದಾರೆ ಗೊತ್ತಿಲ್ಲ. ಅವರು ಬರುವಾಗ ಮಾಧ್ಯಮಗಳಿಗೆ ಹೇಳಿ ಕರೆದುಕೊಳ್ಳುತ್ತೇವೆ'' ಎಂದರು.

ರಾಜ್ಯದಲ್ಲಿ ಬರಗಾಲ ಘೋಷಣೆ ವಿಚಾರಕ್ಕೆ ಮಾತನಾಡಿದ ಸಚಿವ ತಂಗಡಗಿ, ''ಇಲಾಖೆ ಮಂತ್ರಿಗಳು ಸಿಎಂ ಜೊತೆ ಮಾತನಾಡುತ್ತಾರೆ. ಸಿಎಂ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಾರ್ಗಸೂಚಿಗಳ ಬದಲಾವಣೆಗೆ ಕೋರಿದ್ದಾರೆ. ಆದಷ್ಟು ಬೇಗ ಸಿಎಂ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕೊಡಗಲ್ಲಿ ನಿಲ್ಲದ ಕಾಡಾನೆ ದಾಳಿ: ನಿನ್ನೆ ಮತ್ತೆ ಕೂಲಿ ಕಾರ್ಮಿಕ ಮಹಿಳೆ ಬಲಿ.. ಜನರಿಂದ ದಿಕ್ಕಾರ

Last Updated : Aug 22, 2023, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.