ಹುಬ್ಬಳ್ಳಿ: ಜಿಲ್ಲೆ ಸೇರಿದಂತೆ ಕುಂದಗೋಳ ತಾಲೂಕಿನಲ್ಲಿ ಅತಿ ವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬಳೆಗಳಿಗೆ ತಕ್ಕ ಪರಿಹಾರ ಘೋಷಣೆ' ಮಾಡಬೇಕು ಎಂದು ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
ಕುಂದಗೋಳ ತಾಲೂಕಿನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕೊರೊನಾದಿಂದ ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಮಳೆ ಅವಾಂತರ ಆರಂಭವಾಗಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಹೆಸರು, ಶೆಂಗಾ, ಕಡಲೆಕಾಯಿ, ಹಲಸಂದಿ ಸೇರಿದಂತೆ ಹಲವು ಬೆಳೆಗಳಿಗೆ ನಿರ್ದಿಷ್ಟ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಸೋಮರಾವ್ ದೇಸಾಯಿ, ಕಿಸಾನ ಘಟಕದ ಅಧ್ಯಕ್ಷ ಗಂಗಪ್ಪ ಪಾಣಿಘಟ್ಟಿ ನಾಗಾರಾಜ ದೇಶಪಾಂಡೆ , ಸಿದ್ದಪ್ಪ ಇಂಗಹಳ್ಳಿ ಇದ್ದರು.