ETV Bharat / state

Hubli Riot Case: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: ಅಮಾಯಕರ ವಿರುದ್ಧ ದೇಶದ್ರೋಹ ಕಾನೂನು ದುರ್ಬಳಕೆ ಆರೋಪ, ರದ್ದತಿಗೆ ಆಗ್ರಹ

author img

By

Published : Jun 10, 2023, 4:51 PM IST

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: 148 ಅಮಾಯಕರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ದೇಶದ್ರೋಹ ಕೇಸ್ ದಾಖಲಿಸಿದ್ದು, ಈ ಪ್ರಕರಣ ಹಿಂಪಡೆಯಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಸುನೀಲ್ ಸಾಂಡ್ರಾ, ಸಮತಾ ಸೇನೆ ಮುಖಂಡ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದ್ದಾರೆ.

Sunil Sandra spoke to reporters.
ಸುನೀಲ್ ಸಾಂಡ್ರಾ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಹಿಂದಿನ ಸರ್ಕಾರ ದುರುದ್ದೇಶದಿಂದ ಪ್ರಕರಣ ದಾಖಲು ಮಾಡಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿತ್ತು. ಕೆಲ ಅಮಾಯಕರನ್ನು ಜೈಲಿಗೆ ಕಳಿಸಿದ್ದು, ಬಿಜೆಪಿಯಿಂದ ದೇಶದ್ರೋಹ ಕಾನೂನು ದುರ್ಬಳಕೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಸುನೀಲ್ ಸಾಂಡ್ರಾ, ಸಮತಾ ಸೇನೆ ಮುಖಂಡ ಗುರುನಾಥ ಉಳ್ಳಿಕಾಶಿ ಆರೋಪಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಲಂ 321 ರ ಅಡಿ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಹಿಂದೂ ಮುಸ್ಲಿಂ ತಾರತಮ್ಯದ ವಿಷಬೀಜವನ್ನು ಬಿತ್ತುವ ಯತ್ನವಾಗಿ ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಎಷ್ಟು ಅಸತ್ಯದಿಂದ ಕೂಡಿದೆ’ ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಿಸಿರುವ ದೇಶದ್ರೋಹದ ಕಲಂ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ 155 ಜನರಲ್ಲಿ 8 ಜನ ಮಾತ್ರ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. 148 ಜನ, ಜೈಲಿನಿಂದ ಹೊರಬರದಂತೆ ದುರುದ್ದೇಶಪೂರ್ವಕ ದೇಶದ್ರೋಹದ ಕೇಸ್ ದಾಖಲಿಸಲಾಗಿದೆ ಎಂದು ದೂರಿದರು.

14 ತಿಂಗಳಿನಿಂದ 148 ಜನ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ದೇಶದ್ರೋಹದ ಕಲಂ ಆಡಿ 148 ಜನರ ಕುಟುಂಬಗಳು, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತುಂಬಲಾರದ ನಷ್ಟಕ್ಕೆ ಒಳಗಾಗಿದ್ದಾರೆ. ದೇಶ ದ್ರೋಹದ ಕಾನೂನಿನ ಹೆಸರಿನಲ್ಲಿ ದುರುಪಯೋಗವಾಗುತ್ತಿರುದನ್ನು ತಡೆಯಲು ಕಾನೂನಿನ ತಿದ್ದುಪಡಿ ಮಾಡುವುದು ದೇಶದ ಹಿತದೃಷ್ಟಿಯಿಂದ ಅತ್ಯವಶ್ಯ ಎಂದು ಸಾಂಡ್ರಾ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿಯ ಪೋಲಿಸ್ ಠಾಣೆಯಲ್ಲಿ ದಿನಾಂಕ 16-04-2022 ರಂದು 156 ಜನರ ವಿರುದ್ಧ ಸ್ಪೇಶಲ್ ಸಿ.ನಂ.2263/22 ರ ಪ್ರಕರಣ ಹಿಂಪಡೆಯಲು ಸಿ.ಆರ್.ಪಿ.ಸಿ. ಕಲಂ 371 ರ ಅಡಿಯಲ್ಲಿ ಆವಕಾಶವಿದೆ. ಆದ್ದರಿಂದ ಈ ಪ್ರಕರಣದ ಕುರಿತು ಗಂಭೀರ ಗಮನ ನೀಡಿ, 156 ಜನರ ವಿರುದ್ಧ ಇರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ಉತ್ತರ ಪ್ರದೇಶದ ಮುಜಾಪುರ ಪ್ರಕರಣ: ಇಂಥ ಪ್ರಕರಣಗಳಲ್ಲಿ 321ರಡಿ ಆರೋಪಿತರನ್ನು ಬಿಡುಗಡೆಗೊಳಿಸಿದಂತಹ ಸಾಕಷ್ಟು ಉದಾಹರಣೆಗಳಿವೆ. ಉತ್ತರಪ್ರದೇಶದ ಮುಜಾಪುರ ನಗರದಲ್ಲಿ 2013ರಲ್ಲಿ ನಡೆದ ಪ್ರಕರಣದಲ್ಲಿ 60 ಜನ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು. 50 ಸಾವಿರ ಜನ ಸ್ಥಳಾಂತರಗೊಂಡಿದ್ದರು.

ಸದರ ಪ್ರಕರಣದಲ್ಲಿ ಮಾಜಿ ಕೇಂದ್ರ ಮಂತ್ರಿ ಸಂದೀಪ ಬಾಲಿಯನ, ವಿಎಚ್​​ಪಿಯ ಧುರೀಣಿ ಸಾದ್ವಿ ಪ್ರಾಚಿ, ಬಿಜೆಪಿಯ ಶಾಸಕ ಉಮೇಶ ಮಲ್ಲಿಕ, ಸಂಗೀತ ಸೋಮ ಹಾಗೂ ಸಂಸದ ಸುರೇಶ ರಾಣಾ ಹಾಗೂ ಬರ್ತೇಂದ್ರ ಸಿಂಗ್ ಇವರೆಲ್ಲ ಈ ಪ್ರಕರಣದಲ್ಲಿ ಆರೋಪಿತರಾಗಿದ್ದು, ಕೋಮು ದಳ್ಳುರಿ ಪ್ರಕರಣದ ಹಿನ್ನೆಲೆ ಮುಜಾಪುರನಗರ ಹಾಗೂ ಶಾಮಿಲಿ ನಗರದಲ್ಲಿ 1450 ಜನರ ವಿರುದ್ಧ 500 ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಈ ಪ್ರಕರಣದಲ್ಲಿ 131 ಪ್ರಕರಣಗಳನ್ನು ಹಿಂಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಆದೇಶ ನೀಡಿದ್ದು ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂಓದಿ:School uniform scam: ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.