ETV Bharat / state

ಕ್ಷುಲ್ಲಕ ಕಾರಣಗಳಿಗೆ ಹರಿಯುತ್ತಿದೆ ನೆತ್ತರು: ವಾಣಿಜ್ಯ ನಗರಿ ಕ್ರೈಂ ರೇಟ್​ಗೆ ಕಂಗಾಲಾದ ಪೊಲೀಸ್ ಇಲಾಖೆ..

author img

By

Published : Dec 12, 2022, 6:03 PM IST

ಆಸ್ತಿ ವಿಚಾರ, ವೈಯಕ್ತಿಕ ದ್ವೇಷ, ಕುಟುಂಬ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕುಲ್ಲಕ ಕಾರಣಕ್ಕೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ 17 ಕೊಲೆ ಹಾಗೂ 73ಕ್ಕೂ ಹೆಚ್ಚು ಕೊಲೆ ಯತ್ನ ಪ್ರಕರಣಗಳು ಹುಬ್ಬಳ್ಳಿ ಠಾಣೆಯಲ್ಲಿ ದಾಖಲಾಗಿದೆ.

ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್
ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್
ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಮಾತನಾಡಿದರು

ಹುಬ್ಬಳ್ಳಿ: ಛೋಟಾ ಮುಂಬೈ ಹೆಸರು ಹೇಳುತ್ತಲೇ ಪ್ರಖ್ಯಾತಿಗಿಂತ ಕುಖ್ಯಾತಿಯಿಂದಲೇ ಹೆಸರಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆಗಳು, ದರೋಡೆ, ಲ್ಯಾಂಡ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳದಷ್ಟು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿವೆ.‌

ಆಸ್ತಿ ವಿಚಾರ, ವೈಯಕ್ತಿಕ ದ್ವೇಷ, ಕುಟುಂಬ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕುಲ್ಲಕ ಕಾರಣಕ್ಕೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಲ್ಲಿ 17 ಕೊಲೆ ಹಾಗೂ 73ಕ್ಕೂ ಹೆಚ್ಚು ಕೊಲೆ ಯತ್ನ ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದೆ. ಅದರಲ್ಲಿ ಗಾಂಜಾ ಘಾಟು, ಮಾದಕ ವ್ಯಸನದಿಂದಲೇ ಬಹುತೇಕ ಕ್ರೈಂಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಅಪರಾಧ ತಡೆಯಲು ಸಾಧ್ಯವಾಗುತ್ತಿಲ್ಲ: ಮೊನ್ನೆಯಷ್ಟೇ ತಂದೆಯೊಬ್ಬ ತನ್ನ ಮಗನನ್ನು ಕೊಲೆ ಮಾಡಿಸಿದ ಪ್ರಕರಣದ ಹಿಂದೆಯೂ ಆರೋಪಿತ ತಂದೆ ಮಗನ ದುಶ್ಚಟದ ಬಗ್ಗೆ ಬಾಯಿ ಬಿಟ್ಟಿದ್ದ. ಮಾದಕ ವ್ಯಸನಕ್ಕೆ ಮಾರು ಹೋಗುತ್ತಿರುವ ಯುವ ಸಮುದಾಯ ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳು ಝಳಪಿಸುವಂತೆ ಮಾಡುತ್ತಿದೆ.

ಅಲ್ಲದೇ ಬಹುತೇಕ ಪ್ರಕರಣಗಳು ಆಸ್ತಿ ವಿಚಾರ, ದ್ವೇಷ ಹಾಗೂ ಪ್ರೀತಿ- ಪ್ರೇಮ ವಿಚಾರವಾಗಿ ನಡೆದ ಅಪರಾಧಗಳು ಎಂದು ತನಿಖಾ ಸಮಯದಲ್ಲಿ ತಿಳಿದು ಬಂದಿದೆ. ಇದೆಲ್ಲದಕ್ಕೂ ಪೊಲೀಸರು ಕಡಿವಾಣ ಹಾಕಲು ರೌಡಿಶೀಟರ್​ಗೆ ಎಚ್ಚರಿಕೆ, ಮಾರಕಾಸ್ತ್ರ ವಶ ಹಾಗೂ ಪೊಲೀಸ್ ಬಾರಿ ಬಂದೋಬಸ್ತ್​​ ವಹಿಸಿದ್ದರೂ ಅಪರಾಧ ತಡೆಯಲು ಸಾಧ್ಯವಾಗುತ್ತಿಲ್ಲ.

ಹಳೆ ಹುಬ್ಬಳ್ಳಿ ಭಾಗದಲ್ಲಿ ಪ್ರಕರಣಗಳ ಹೆಚ್ಚಳ: ಇನ್ನು ಹಲವಾರು ಅಪರಾಧ ಪ್ರಕರಣದಲ್ಲಿ ಭಾಗಿಯಾದವರಿಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಆದರೆ, ಸಾಮಾನ್ಯ ಜನರು ಅಪರಾಧ ಕೃತ್ಯದಲ್ಲಿ ತೊಡಗುತ್ತಿದ್ದಾರೆ. 2022ರಲ್ಲಿ ನಡೆದ ಕೊಲೆ ಪ್ರಕರಣ ಹಳೆ ಹುಬ್ಬಳ್ಳಿ ಭಾಗದಲ್ಲಿಯೇ ಹೆಚ್ಚಾಗಿದೆ. ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಕರು ಇಂತಹ ಕೃತ್ಯದಲ್ಲಿ ತೊಡಗುತ್ತಿದ್ದಾರೆ.

ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕ ಅಭದ್ರತೆ: ಉದಾಹರಣೆಗೆ ಕಳೆದೆರಡು ತಿಂಗಳ ಹಿಂದೆ ಹಳೇ ಹುಬ್ಬಳ್ಳಿ ಬಾ‌ರ್​ವೊಂದರ ಮುಂದೆ ಸಿಗರೇಟ್ ಹಾಗೂ ಗುಟ್ಕಾ ಕೊಡಿಸುವ ವಿಚಾರವಾಗಿ ವ್ಯಕ್ತಿ ಓರ್ವ ಚಾಕುವಿನಿಂದ ಇರಿದು ಸ್ನೇಹಿತನನ್ನು ಕೊಲೆ ಮಾಡಿದ್ದ. ಹೆಚ್ಚುತ್ತಿರುವ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿಂದ ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕ ಅಭದ್ರತೆ ಕಾಡುತ್ತಿದೆ. ಅಧಿಕಾರಿಗಳಿಗೆ ಪೊಲೀಸ್ ಮನೆ ಮನೆಗೆ ತೆರಳಿ ಒಂದು ಕಡೆ ಕಟ್ಟೆಚ್ಚರ ನೀಡುತ್ತಿದ್ದರೆ, ಇನ್ನೊಂದು ಪ್ರಕರಣದಲ್ಲಿ ತಲೆನೋವಾಗಿ ಪರಿಣಮಿಸಿದೆ.

ಪೊಲೀಸ್ ಇಲಾಖೆಯಿಂದ ಬಿಗಿಯಾದ ಕ್ರಮ: ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಹೆಚ್ಚಾಗಿ ಯುವಕರೇ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದ್ದು, ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಬೇಕಾದ ಪೋಷಕರೇ ಮಕ್ಕಳು ದಾರಿ ತಪ್ಪಿದರೂ ಸುಮ್ಮನಿರುವುದು ಮೂಲ ಕಾರಣವಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಬಿಗಿಯಾದ ಕ್ರಮಗಳನ್ನು ಜರುಗಿಸಬೇಕಿದೆ.

ಓದಿ: ಪೊಲೀಸರ ಮೇಲೆ ಹಲ್ಲೆ: ಕುಖ್ಯಾತ ರೌಡಿಶೀಟರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.