ಹುಬ್ಬಳ್ಳಿ: ನೆಹರೂ ಮೈದಾನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ಸಹಯೋಗದಲ್ಲಿ ನಡೆದ ಅಂತರ್ ವಿಭಾಗೀಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಚಾಲಕ-ನಿರ್ವಾಹಕರ ಕ್ರಿಕೆಟ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
![cricket at hubli](https://etvbharatimages.akamaized.net/etvbharat/prod-images/4995289_cricket.jpg)
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಯಾವ ಕ್ರೀಡಾಪಟುವಿಗೂ ಕಡಿಮೆಯಿಲ್ಲದ ರೀತಿಯಲ್ಲಿ ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸಿದರು. ಇವರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಸಂಸ್ಥೆಯ ಕಾರ್ಮಿಕರಂತೆ ಬ್ಯಾಟ್ ಬೀಸಿ ನೋಡುಗರ ಮನಸೂರೆಗೊಳಿಸಿದರು. ದಿನವಿಡೀ ಬಸ್ಸಿನಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಸೇವೆ ಸಲ್ಲಿಸುವ ಕಾಯಕಯೋಗಿಗಳು ಒಂದು ದಿನ ಬಿಡುವಿನಲ್ಲಿ ಕೂಡ ಕ್ರೀಡಾ ಉತ್ಸಾಹವನ್ನು ತೋರಿದ್ದು ವಿಶೇಷವಾಗಿತ್ತು.