ETV Bharat / state

ಫಾರ್ಚುನರ್​ ಕಾರಲ್ಲಿ ಬಂದು ಗೋವು ಕದ್ದೊಯ್ದ ಖದೀಮರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಳ್ಳರು ಫಾರ್ಚುನರ್ ಕಾರಿನಲ್ಲಿ ಬಂದು ಗೋವನ್ನು ಕದ್ದು ಪರಾರಿಯಾಗಿರುವ ಘಟನೆ ಧಾರವಾಡ ನಗರದ ವೈದ್ಯಮಠ ಕಾಂಪ್ಲೆಕ್ಸ್ ಬಳಿ ನಡೆದಿದೆ.

cow theft
ಗೋವು ಕಳ್ಳತನ
author img

By

Published : Mar 23, 2021, 3:41 PM IST

ಧಾರವಾಡ: ವಿದ್ಯಾಕಾಶಿ, ಪೇಡಾ ನಗರಿ ಎಂದು ಹೆಸರು ಪಡೆದುಕೊಂಡಿರುವ ಧಾರವಾಡದಲ್ಲೀಗ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಗೋವು ಕಳ್ಳರ ಹಾವಳಿಯೂ ಹೆಚ್ಚಾಗಿದೆ.

ಹೌದು, ಕೆಲಗೇರಿ ಮಾರ್ಗದಲ್ಲಿರುವ ವೈದ್ಯಮಠ ಕಾಂಪ್ಲೆಕ್ಸ್ ಬಳಿ ಪ್ರತಿಭಾ ಕಾಲೋನಿಯ ಗಿರೀಶ ಹನುಮಂತರಾವ್ ಕುಲಕರ್ಣಿ ಎಂಬುವವರಿಗೆ ಸೇರಿದ ಗೋವುಗಳು ಇದೀಗ ಕಳ್ಳತನವಾಗಿವೆ. ಇದರಿಂದ ಸಣ್ಣ ಸಣ್ಣ ಆಕಳ ಮರಿಗಳು ತಾಯಿ ಇಲ್ಲದೇ ಕಂಗಾಲಾಗಿವೆ.

ಗೋವು ಕಳ್ಳತನ

ಇಲೆಕ್ಟ್ರಿಶಿಯನ್ ಕೆಲಸ ಮಾಡಿಕೊಂಡಿರುವ ಗಿರೀಶ್​ ಎಂಬುವರಿಗೆ ಮೂರು ಆಕಳು ಹಾಗೂ‌ ಮೂರು ಆಕಳು ಮರಿಗಳಿವೆ. ಅವುಗಳ ಪೈಕಿ ಒಂದನ್ನು ರಾತ್ರಿ ಕಳ್ಳರು ಫಾರ್ಚುನರ್ ಕಾರಿನಲ್ಲಿ ಕೆಲಗೇರಿ ಕಡೆಯಿಂದ ಆಗಮಿಸಿ ಅರ್ಧ ಗಂಟೆ ಕಾಲ ಅಲ್ಲಿಯೇ ಸುತ್ತಾಡಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಗೋವುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಗೋವು ಕಳ್ಳತನ ಮಾಡಿಕೊಂಡ ಹೋಗಿರುವ ಕಳ್ಳರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗೋವು ಕಳೆದುಕೊಂಡ ಮಾಲೀಕ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸುಮಾರು 20 ಸಾವಿರ ರೂ. ಮೌಲ್ಯದ ಗೋವು ಕಳ್ಳತನವಾಗಿದ್ದು, ಗೋವು ಮಾಲೀಕ ಗಿರೀಶ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರೆ, ಇತ್ತ ಬಜರಂಗ ಕಾರ್ಯಕರ್ತರು ಗೋವು ಕಳ್ಳತನ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.