ಹುಬ್ಬಳ್ಳಿ : ಕೋವಿಡ್-19 ತಪಾಸಣೆಗೆಂದು ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿ ಮಹಿಳೆಯರು ತಪಾಸಣೆ ವಿಳಂಬವಾಗಿದ್ದರಿಂದ ಗಂಟೆಗಳ ಕಾಲ ಪರದಾಡುವಂತಾಯಿತು.
ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯರು ಮಧ್ಯಾಹ್ನದವರೆಗೂ ಕಾದರೂ ಕೋವಿಡ್-19 ತಪಾಸಣೆ ಪ್ರಾರಂಭವಾಗಿಲ್ಲ. ಅತ್ತ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೇ ಮಳೆಯಲ್ಲಿಯೇ ಮಹಿಳೆಯರು ಪರದಾಡುವ ಪರಿಸ್ಥಿತಿ ಎದುರಾಗಿದೆ.