ಹುಬ್ಬಳ್ಳಿ: ನಗರದ ಘಂಟಿಕೇರಿಯ ನೆಹರು ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ವತಿಯಿಂದ ವಿದ್ಯಾರ್ಥಿಗಳ ಅಧ್ಯಯನ ಸಮಸ್ಯೆಗಳು ಮತ್ತು ಅವಕಾಶಗಳ ಮೇಲೆ ಕೊವಿಡ್-19 ಪ್ರಭಾವ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಉಪನ್ಯಾಸ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಸ್ಪರ್ಧೆಯಲ್ಲಿ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 51 ವಿದ್ಯಾರ್ಥಿಗಳು ತಮ್ಮ ಭಾಷಣದ ವಿಡಿಯೋ ತುಣುಕುಗಳನ್ನು ವಾಟ್ಸ್ಆ್ಯಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದರು. ಆ ಮೂಲಕ ಕೊರೊನಾ ವೈರಸ್ ಶಿಕ್ಷಣದ ಮೆಲೆ ಬೀರಿದ ಪರಿಣಾದ ಬಗ್ಗೆ ವಿದ್ಯಾರ್ಥಿಗಳು ವಿವರಣೆ ನೀಡಿದ್ದರು.
ವಿವಿಧ ಕಾಲೇಜಿನ ಮೂವರು ಪ್ರಖ್ಯಾತ ಪ್ರಾಧ್ಯಾಪಕರು ವಿಡಿಯೋ ತುಣುಕುಗಳನ್ನು ನೋಡಿ ನಿರ್ಣಯಿಸಿ ಫಲಿತಾಂಶ ನೀಡಿದ್ದಾರೆ. ಫಲಿತಾಂಶವನ್ನು ವಾಟ್ಸ್ಆ್ಯಪ್ ಮೂಲಕ ಘೋಷಣೆ ಮಾಡಲಾಯಿತು.
ಪ್ರಶಸ್ತಿ :
ಪ್ರಥಮ ಬಹುಮಾನ 2000 ರೂ., ದ್ವಿತೀಯ 1000 ರೂ., ತೃತೀಯ 500 ರೂ. ಎಂದು ಷೋಷಸಿಲಾಗಿತ್ತು. ಪ್ರಥಮ ಸ್ಥಾನವನ್ನು (ಕಮಲಾ ಬಲಿಗಾ ಹಾವೇರಿ), ಎರಡನೇ ಸ್ಥಾನ (ಶ್ರೀ ಮೃತ್ಯುಂಜಯ ಕಬ್ಬೂರ್), ಪಡೆದುಕೊಂಡರು. ಉಳಿದಂತೆ ಭಾಗವಹಿಸಿದ 51 ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.