ಹುಬ್ಬಳ್ಳಿ: ರಾಜ್ಯದಲ್ಲಿ ಲಾಕ್ಡೌನ್ ಜೂನ್ 7 ರವರೆಗೆ ಇದ್ದು, ಕೊರೊನಾ ಪಾಸಿಟಿವಿಟಿ ದರ ಕಡಿಮೆ ಆದರೆ ಅನ್ಲಾಕ್ ಮಾಡಲು ತಯಾರಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಈ ಬಗ್ಗೆ ಕಾದು ನೋಡೋಣ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಎರಡು ಮೂರು ದಿನದಲ್ಲಿ ಮತ್ತೆ ಕೇಸ್ಗಳು ಕಡಿಮೆ ಆಗಲಿವೆ. ರಾಜ್ಯದಲ್ಲಿ ಲಾಕ್ಡೌನ್ ಸಕ್ಸಸ್ ಆಗಿದೆ. ಹಂತ ಹಂತವಾಗಿ ಅನ್ಲಾಕ್ ಮಾಡ್ಬೇಕೋ ಅಥವಾ ಒಮ್ಮೆಲೆ ಅನ್ಲಾಕ್ ಮಾಡ್ಬೇಕು ಎನ್ನೋದನ್ನ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ರೆಮ್ಡಿಸಿವಿರ್ ಉಚಿತವಾಗಿ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ಗೆ ಔಷಧಿ ಎಲ್ಲರಿಗೂ ಸಿಗಲಿದೆ. ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ 7 ವರ್ಷ ಆಯಿತು. ಕೋವಿಡ್ ಹಿಮ್ಮೆಟ್ಟಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದೆ. ಇಲ್ಲಿಯವರೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಮುಂದೆಯೂ ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಓದಿ:ಶಾಕಿಂಗ್: ಗಂಡಿಬಾಗಿಲು ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟ: 210 ಮಂದಿಗೆ ಪಾಸಿಟಿವ್!