ಹುಬ್ಬಳ್ಳಿ: ಆರೋಪಿಗಳು ಸಿಕ್ಕರೂ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರದಂತಹ ಸ್ಥಿತಿ ಹುಬ್ಬಳ್ಳಿ ಪೊಲೀಸರಿಗೆ ಎದುರಾಗಿದೆ.
ನಗರದ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಲ್ಲಿ ಒಬ್ಬನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ನಗರದ ಪ್ರಮುಖ ಪೊಲೀಸ್ ಠಾಣೆಯ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕು ಹೇಗೆ ಬಂತು ಎಂಬುದು ತಿಳಿಯದಂತಾಗಿದೆ.
ಈ ಹಿಂದೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ಮಾಡಿದ್ದ ಆರೋಪಿಗೆ ಕೊರೊನಾ ಧೃಡಪಟ್ಟಿತ್ತು. ಜೊತೆಗೆ ಉಪನಗರ ಠಾಣೆಯಲ್ಲಿ ಕಳ್ಳನೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿತ್ತು. ಅಶೋಕ ನಗರ ಠಾಣೆಯಲ್ಲಿ ವಿಧವೆಗೆ ವಂಚಿಸಿದ ಆರೋಪಿಗೂ ಸೋಂಕು ದೃಢಪಟ್ಟಿತ್ತು.
ಸದ್ಯ ಕಸಬಾ ಪೇಟೆ ಠಾಣೆಯಲ್ಲಿ ಇಬ್ಬರು ಕಳ್ಳರಲ್ಲಿ ಒಬ್ಬನಿಗೆ ಕೊರೊನಾ ಧೃಡಪಟ್ಟಿದ್ದು, ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.