ETV Bharat / state

ಶಿರಕೋಳದ ಅವಿಭಕ್ತ ಕುಟುಂಬದ ಮೇಲೂ ಕೊರೊನಾ ಕೆಂಗಣ್ಣು: 60 ಸದಸ್ಯರಿಗೆ ಹೋಮ್​ ಕ್ವಾರಂಟೈನ್! - ಶಿರಕೋಳ ಗ್ರಾಮದ ಅವಿಭಕ್ತ ಕುಟುಂಬ

ಧಾರವಾಡ ಜಿಲ್ಲೆಯ ಅವಿಭಕ್ತ ಕುಟುಂಬದ ಮೇಲೆ ಮಹಾಮಾರಿ ಕೊರೊನಾ ಕೆಂಗಣ್ಣು ಬೀರಿದೆ. ಈ ಕುಟುಂಬದ ಒಬ್ಬ ಸದಸ್ಯನಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಕುಟುಂಬದ ಎಲ್ಲ 60 ಜನರನ್ನು ಕ್ವಾರಂಟೈನ್​ ಮಾಡಲಾಗಿದೆ.

Dharwad joint family
ಧಾರವಾಡ ಅವಿಭಕ್ತ ಕುಟುಂಬ
author img

By

Published : Jun 29, 2020, 11:09 AM IST

Updated : Jun 29, 2020, 11:34 AM IST

ಧಾರವಾಡ: ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬದ ಮೇಲೆ ಕೊರೊನಾ ತನ್ನ ಕೆಂಗಣ್ಣು ಬೀರಿದೆ. ಇದರಿಂದ ಒಂದೇ ಕುಟುಂಬದ 60 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿರುವ ಈ ಕುಟುಂಬದ ಓರ್ವ ಯುವಕನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ 60 ಜನ ವಾಸಿಸುತ್ತಿದ್ದ ಅವಿಭಕ್ತ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ.

ಇದೀಗ ಇಡೀ ಗ್ರಾಮಕ್ಕೆ ಗ್ರಾಮವೇ ಸ್ತಬ್ಧವಾಗಿದ್ದು, ಕುಟುಂಬದ 36 ವರ್ಷದ ವ್ಯಕ್ತಿ(ಪಿ-12121)ಗೆ ನಿನ್ನೆ ಸೋಂಕು ದೃಢಪಟ್ಟಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.

‌ಸ್ಥಳೀಯವಾಗಿ ವ್ಯಾಪಾರ-ವಹಿವಾಟು ನಡೆಸುವ ದೊಡ್ಡ ಕುಟುಂಬ ಇದಾಗಿದೆ. ಈ ಹಿನ್ನೆಲೆ ಇಡೀ ಗ್ರಾಮದಲ್ಲಿ ಕೊರೊನಾ ಆತಂಕ ಆವರಿಸಿದೆ.

Last Updated : Jun 29, 2020, 11:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.