ಧಾರವಾಡ : ಜಿಲ್ಲೆಯಲ್ಲಿ ಇಂದು ಕೂಡಾ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಜಿಲ್ಲೆಯಲ್ಲಿ 30 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 274 ಕ್ಕೆ ಏರಿದೆ.
ಹೊಸ ಸೋಂಕಿತರಲ್ಲಿ ಕೆಮ್ಮು, ನೆಗಡಿ, ಜ್ವರದಿಂದ ಅತಿ ಹೆಚ್ಚು ಜನ ಬಳಲುತ್ತಿದ್ದರು. 20 ಜನ ಸೊಂಕಿತರಿಗೆ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದರು. ಇವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಪಿ-8743ರ ಸಂಪರ್ಕದಿಂದ ಇಬ್ಬರಿಗೆ, ಪಿ-9416ರ ಸಂಪರ್ಕದಿಂದ ಒಬ್ಬರಿಗೆ, ಪಿ-9417ರ ಸಂಪರ್ಕದಿಂದ ಒಬ್ಬರಿಗೆ, ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರವಾಸದಿಂದ ಒಬ್ಬರಿಗೆ ಸೋಂಕು ತಗುಲಿದೆ.
ಪಶ್ಚಿಮ ಬಂಗಾಳ ಮತ್ತು ದಾವಣಗೆರೆ ಪ್ರವಾಸದಿಂದ ಇಬ್ಬರಿಗೆ ಸೋಂಕು ತಗುಲಿದೆ. ನಾಲ್ವರು ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ನಿಂದ ಬಳಲುತ್ತಿದ್ದ ಹೆಚ್ ಐವಿ ರೋಗಿ ಮೃತ : ಕೋವಿಡ್, ಏಡ್ಸ್ ಹಾಗೂ ಇತರ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ ಪಿ-8753 (42 ವರ್ಷ, ಪುರುಷ) ಜೂನ್ 24ರ ರಾತ್ರಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಒಣಕೆಮ್ಮು, ಆಹಾರ ನುಂಗಲು ತೊಂದರೆ, ನಿಶ್ಶಕ್ತಿ ಮತ್ತಿತರ ರೋಗ ಲಕ್ಷಣಗಳಿಂದ ಬಳಲುತ್ತಿದ್ದರು. ಪಿ- 6839 ಅವರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಜೂನ್ 21ರಂದು ಕೋವಿಡ್-19 ದೃಢಪಟ್ಟಿತ್ತು.
ಶ್ವಾಸಕೋಶದ ಸಮಸ್ಯೆ ಮೊದಲಾದ ಕಾರಣಗಳಿಂದ ನಿನ್ನೆ ಜೂನ್ 24ರಂದು ರಾತ್ರಿ 11.15ಕ್ಕೆ ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಜೂನ್ 25ರಂದು ಜರುಗಿತು. ಜಿಲ್ಲೆಯಲ್ಲಿ ಇದುವರೆಗೆ ನಾಲ್ವರು ಕೋವಿಡ್-19 ಪಾಸಿಟಿವ್ ರೋಗಿಗಳು ಮರಣ ಹೊಂದಿದ್ದಾರೆ.