ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗೆ ಸ್ಯಾಂಪಲ್ಸ್ ಕಳಿಸಿದ್ದ 148 ಜನರ ಪೈಕಿ 63 ಜನರ ವರದಿ ನೆಗೆಟಿವ್ ಬಂದಿದೆ, ಇಬ್ಬರದ್ದು ಪಾಸಿಟಿವ್ ಬಂದಿದೆ ಎಂದು ಗುರುವಾರ ಆರೋಗ್ಯ ಇಲಾಖೆ ತಿಳಿಸಿದೆ.
ಹುಬ್ಬಳ್ಳಿ ಮೂಲದ ಇಬ್ಬರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಬುಧವಾರದವರೆಗೆ ದಾಖಲಾಗಿದ್ದ ಶಂಕಿತರ ಪೈಕಿ 85 ಜನರ ಪರೀಕ್ಷಾ ವರದಿ ಬರಲು ಬಾಕಿಯಿದೆ. ಗುರುವಾರ ಒಟ್ಟು 125 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದೆ ಎಂದು ಮಾಹಿತಿ ನೀಡಿದೆ.
ಒಟ್ಟು 208 ಜನರ ವರದಿ ನಿರೀಕ್ಷಿಸಲಾಗಿದೆ. 13 ಜನರನ್ನು ಐಸೋಲೇಶನ್ನಲ್ಲಿಡಲಾಗಿದೆ. ಒಟ್ಟು 1,984 ಜನರ ಮೇಲೆ ನಿಗಾವಹಿಸಲಾಗಿದೆ. 1,257 ಜನರನ್ನು 14 ದಿನಗಳ ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ. 28 ಜನರ 14 ದಿನಗಳ ಕ್ವಾರಂಟೈನ್ ಹಾಗೂ 686 ಜನರ 28 ದಿನಗಳ ಕ್ವಾರಂಟೈನ್ ಪೂರ್ಣಗೊಂಡಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.