ಧಾರವಾಡ: ಜಿಲ್ಲೆಯಲ್ಲಿಂದು 227 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಸೋಂಕಿತರ ಸಂಖ್ಯೆ 12,684ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ
12,684 ಸೋಂಕಿತರ ಪೈಕಿ ಈವರೆಗೆ ಒಟ್ಟು 9,693 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾಗೆ 364 ಮಂದಿ ಬಲಿಯಾಗಿದ್ದು, ಸದ್ಯ 2,627 ಸಕ್ರಿಯ ಪ್ರಕರಣಗಳಿವೆ. 68 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡವನ್ನು ಹೊರತುಪಡಿಸಿ ಹಾವೇರಿ, ಬೆಳಗಾವಿ, ಕೊಪ್ಪಳ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಂದ ಬಂದ ಹಲವರಿಗೂ ಸೋಂಕು ದೃಢಪಟ್ಟಿದೆ.