ಧಾರವಾಡ: ಬೆಂಗಳೂರು ಮೂಲದ ಪಿಎಸ್ಐಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಪಿಎಸ್ಐ ಭೇಟಿ ನೀಡಿದ್ದ ಠಾಣೆಗೆ ಸ್ಯಾನಿಟೈಸ್ ಮಾಡಿ ಸೋಂಕಿತನನ್ನು ಭೇಟಿ ಮಾಡಿದ್ದ ಸ್ಥಳೀಯ ಪಿಎಸ್ಐನನ್ನು ಕ್ವಾರಂಟೈನ್ ಮಾಡಲಾಗಿದೆ.
ಧಾರವಾಡದ ಉಪನಗರ ಠಾಣೆಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸೋಂಕಿತ ಪಿಎಸ್ಐ ಭೇಟಿ ನೀಡಿದ್ದರು. ಈ ಹಿನ್ನೆಲೆ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಭೇಟಿಯಾಗಿದ್ದ ಸ್ಥಳೀಯ ಪಿಎಸ್ಐ ಸ್ವ್ಯಾಬ್ ಸಂಗ್ರಹಿಸಿ ಕೋವಿಡ್ ಟೆಸ್ಟ್ಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸೋಂಕಿತ ಪಿಎಸ್ಐ ಭೇಟಿ ಹಿನ್ನೆಲೆ ಉಪನಗರ ಠಾಣೆ ಪೊಲೀಸರಿಗೂ ಸಹ ಕೊರೊನಾ ಭೀತಿ ಶುರುವಾಗಿದೆ.
ಸೋಂಕಿತ ಪಿಎಸ್ಐ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದಾರೆ. ರಜೆ ಮೇಲೆ ಊರಿಗೆ ಹೋಗುವ ಮುಂಚೆ ಟೆಸ್ಟ್ ಮಾಡಿಸಿಕೊಂಡಿದ್ದರು. ಊರಿಗೆ ಹೋಗುವ ದಾರಿ ಮಧ್ಯದಲ್ಲೇ ಕೋವಿಡ್ ಟೆಸ್ಟ್ ಬಗ್ಗೆ ದೂರವಾಣಿ ಕರೆ ಬಂದ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ಗೆ ತೆರಳಿ ಪಿಎಸ್ಐ ದಾಖಲಾಗಿದ್ದಾರೆ.