ಧಾರವಾಡ: ಜಿಲ್ಲೆಯ ಕೊರೊನಾ ಬುಲೆಟಿನ್ ಬಿಡುಗಡೆಗೊಂಡಿದ್ದು ಒಂದೇ ದಿನ 225 ಜನರಲ್ಲಿ ಶಂಕಿತ ಕೊರೊನಾ ಗುಣಲಕ್ಷಣ ಪತ್ತೆಯಾಗಿದೆ. ಅದರಲ್ಲಿ 64 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ 161 ಜನರ ವರದಿ ಬಾಕಿಯಿದೆ.
ನಿನ್ನೆಯವರೆಗೆ ದಾಖಲಾಗಿದ್ದ 218 ಶಂಕಿತರ ವರದಿಯೂ ನೆಗೆಟಿವ್ ಬಂದಿದ್ದು, ಇಂದು ದಾಖಲಾದ 225 ಶಂಕಿತರ ಪೈಕಿ 161 ಜನರ ವರದಿ ಬಾಕಿಯಿದೆ. 10 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಷನ್ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 2,540 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಅದರಲ್ಲಿ 1736 ಜನರಿಗೆ 14 ದಿನಗಳ ಐಸೋಲೇಷನ್ ಇಡಲಾಗಿದೆ. 70 ಜನರಿಂದ 14 ದಿನಗಳ ಐಸೋಲೇಷನ್ ಹಾಗೂ 703 ಜನರಿಂದ 28 ದಿನಗಳ ಐಸೋಲೇಷನ್ ಪೂರ್ಣಗೊಂಡಿದೆ.