ಹುಬ್ಬಳ್ಳಿ : ಕೋವಿಡ್ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ. ಆದ್ರೆ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಕಾಲೇಜುಗಳು ನಡೆಯುತ್ತಿದ್ದವು. ಈಗ ನಗರದ ಶಾಲೆ ಹಾಗೂ ಕಾಲೇಜುಗಳಲ್ಲಿ ಕೊರೊನಾ ಸ್ಫೋಟಗೊಂಡಿದೆ.
ಗೋಕುಲ್ ರಸ್ತೆಯ ಪ್ರಿಯದರ್ಶಿನಿ ಕಾಲೋನಿಯ ಡಾ. ಆರ್ ಬಿ ಪಾಟೀಲ್ ಮಹೇಶ್ ಪಿಯು ಕಾಲೇಜಿನ 53 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಹಳೇ ಹುಬ್ಬಳ್ಳಿಯ ಸೇಂಟ್ ಮಿಷೆಲ್ಸ್ ಹೈಸ್ಕೂಲ್‌ನ 12, ಜೀವೇಶ್ವರ ಪ್ರೌಢಶಾಲೆಯ 12 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ.. ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ ಮಾಡಿದ ಪಿಯು ಬೋರ್ಡ್..
ಸೋಂಕು ದೃಢಪಡುತ್ತಿದಂತೆ ತಾಲೂಕು ಆಡಳಿತ ಪ್ರಿಯದರ್ಶಿನಿ ಕಾಲೋನಿಯ ಡಾ.ಆರ್.ಬಿ. ಪಾಟೀಲ್ ಮಹೇಶ್ ಪಿಯು ಕಾಲೇಜು, ಸೇಂಟ್ ಮಿಷೆಲ್ಸ್ ಹೈಸ್ಕೂಲ್ ಮತ್ತು ಜೀವೇಶ್ವರ ಹೈಸ್ಕೂಲ್ಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ