ETV Bharat / state

ಸೇವಾ ನ್ಯೂನತೆ ಎಸಗಿದ ಗೋಲ್ಡ್ ಪ್ಯಾಲೇಸ್​: ಪರಿಹಾರ ನೀಡುವಂತೆ ಗ್ರಾಹಕರ ಆಯೋಗದ ಆದೇಶ

ದೂರುದಾರನಿಗೆ ಆಗಿರುವ ತೊಂದರೆ, ಮಾನಸಿಕ ಹಿಂಸೆಗೆ 25,000 ರೂ. ಪರಿಹಾರ ಹಾಗೂ 10,000 ರೂ ಪ್ರಕರಣದ ಖರ್ಚು ವೆಚ್ಚ ನೀಡಲು ಗ್ರಾಹಕರ ಆಯೋಗ ಆದೇಶಿಸಿದೆ.

consumer-court-fine-to-hubli-gold-palace
ಸೇವಾ ನ್ಯೂನತೆ ಎಸಗಿದ ಗೋಲ್ಡ್ ಪ್ಯಾಲೇಸ್​; ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ
author img

By

Published : Dec 12, 2022, 7:38 PM IST

ಧಾರವಾಡ: ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್​ಗೆ ಧಾರವಾಡ ಜಿಲ್ಲಾ ಆಯೋಗವು 64.011 ಗ್ರಾಂ ತೂಕದ ಚಿನ್ನ ಮತ್ತು ರೂ.35,000 ಪರಿಹಾರ ನೀಡುವಂತೆ ಆದೇಶಿಸಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರ ಚಿದಂಬರ ನಗರದ ನಿವಾಸಿ ಸತೀಶ ಇಜಂತಕರ ಎಂಬವರು ತಮ್ಮ ಮಗಳು ಬನಶ್ರೀ ಹೆಸರಿನಲ್ಲಿ ಆದಿತ್ಯ ಗೋಲ್ಡ್ ಪರ್ಚೇಜ್ ಯೋಜನೆಯಡಿ ಒಟ್ಟು 19 ಕಂತುಗಳಲ್ಲಿ 2,00,000 ರೂ ಬಂಗಾರದ ಆಭರಣ ಪಡೆಯಲು ಹಣ ಕಟ್ಟಿದ್ದರು. ಹಣಕ್ಕೆ ಸಮಾನಾಂತರವಾಗಿ ಒಟ್ಟು 64.011 ಗ್ರಾಂ ಬಂಗಾರವನ್ನು, ಯೋಜನಾ ಅವಧಿ ಮುಕ್ತಾಯವಾದರೂ ಹಿಂದಿರುಗಿಸದೇ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ, ವಿ.ಅ ಬೋಳಶೆಟ್ಟಿ ಮತ್ತು ಪಿ.ಸಿ ಹಿರೇಮಠ, ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆ ಸಮಾನಾಂತರ ಮೌಲ್ಯದ ಬಂಗಾರ ಕೊಡದೇ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್​ನವರು ದೂರುದಾರನಾದ ತನ್ನ ಗ್ರಾಹಕನಿಗೆ ಸೇವಾ ನ್ಯೂನತೆ ಎಸಗಿದ್ದಾರೆಂದು ತೀರ್ಪು ನೀಡಿ, ಫಿರ್ಯಾದಿದಾರರಿಗೆ 64.011 ಗ್ರಾಂ ತೂಕದ ಚಿನ್ನ ನೀಡುವಂತೆ ಹೇಳಿದ್ದಾರೆ. ಅಲ್ಲದೇ ದೂರುದಾರನಿಗೆ ಆಗಿರುವ ತೊಂದರೆ, ಮಾನಸಿಕ ಹಿಂಸೆಗೆ ರೂ.25,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.

ಇದನ್ನೂ ಓದಿ:ಶುಲ್ಕ ನಿಗದಿ ಮಾಡಿಕೊಳ್ಳಲು ಖಾಸಗಿ ಶಾಲೆಗಳು ಅರ್ಹವಾಗಿವೆ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.