ETV Bharat / state

ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೆಲುಗೈ ಎಫೆಕ್ಟ್: ಚಿಕ್ಕನಗೌಡರಿಗೆ ಕೈ ಪಕ್ಷದಿಂದ ಗಾಳ?

author img

By

Published : May 12, 2023, 1:49 PM IST

ಕಾಂಗ್ರೆಸ್‌‌ಗೆ ಬಹುಮತ ಸಿಗದೇ ಹೋದರೆ ಪಕ್ಷೇತರರನ್ನು ಕರೆತಂದು ಸರ್ಕಾರ ರಚನೆ ಮಾಡಲು ಪ್ಲ್ಯಾನ್ ನಡೆದಿದೆ ಎಂದು ಹೇಳಲಾಗುತ್ತಿದೆ.

ಪಕ್ಷೇತರರನ್ನು ಕರೆತಂದು ಸರ್ಕಾರ ರಚನೆ ಮಾಡಲು ಕಾಂಗ್ರೆಸ್‌‌ ಪ್ಲ್ಯಾನ್ .

ಹುಬ್ಬಳ್ಳಿ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ.10 ರಂದು ಶಾಂತಿಯುಕ್ತವಾಗಿ ಮುಗಿದಿದೆ. ಬಳಿಕ ಬಂದಂತಹ ಚುನಾವಣೋತ್ತರ ಸಮೀಕ್ಷೆ ಹಲವರಿಗೆ ಅಚ್ಚರಿ ಮೂಡಿಸಿದೆ. ಸಮೀಕ್ಷೆಯಲ್ಲಿ ಮೇಲುಗೈ ಸಾಧಿಸುತ್ತಿದಂತೆ ಕಾಂಗ್ರೆಸ್ ಪಕ್ಷ ಫುಲ್ ಅಲರ್ಟ್ ಆಗಿದೆ.

ಈ ಬಾರಿ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಂತ್ರ ರೂಪಿಸಿದ್ದ ಕೈ ಪಕ್ಷ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದೆ. ಫಲಿತಾಂಶ ಹೊರಬೀಳುವ ಮುನ್ನವೇ ಪಕ್ಷೇತರರಿಗೆ ಗಾಳ ಹಾಕಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ ಹಾಗೂ ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಮೂವರಲ್ಲಿ ತೀವ್ರ ಪೈಪೋಟಿ ಇದ್ದು ಒಂದು ವೇಳೆ ಚಿಕ್ಕನಗೌಡ ಗೆದ್ದರೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಮುಂದಾಗಿದೆ.

ಕಾಂಗ್ರೆಸ್‌‌ಗೆ ಸರಿಯಾದ ಬಹುಮತ ಸಿಗದೇ ಹೋದರೆ ಪಕ್ಷೇತರರನ್ನು ಕರೆತಂದು ಸರ್ಕಾರ ರಚನೆ ಮಾಡಲು ಪ್ಲ್ಯಾನ್ ಮಾಡಿದೆ. ಇದರಿಂದಾಗಿ ಚಿಕ್ಕನಗೌಡರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಖಾಂತರವೇ ಪಕ್ಷಕ್ಕೆ ಕರೆತರಲು ಸಿದ್ದತೆ ಮಾಡಲಾಗಿದೆ. ಎಸ್.ಐ.ಚಿಕ್ಕನಗೌಡ ಅವರು ಜಗದೀಶ್ ಶೆಟ್ಟರ್ ಬೆಂಬಲಿಗ ಕೂಡ ಹೌದು. ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಗುರುತಿನೊಂದಿದೆ ಸ್ಪರ್ಧೆ ಮಾಡಿದ್ದರು.

ಎಸ್. ಐ ಚಿಕ್ಕನಗೌಡರ ರಾಜಕೀಯ ಹಿನ್ನೆಲೆ : 1998 ರಲ್ಲಿ ಬಿಜೆಪಿ ಮೊದಲ ಶಾಸಕರಾಗಿ ಎಸ್.ಐ ಚಿಕ್ಕನಗೌಡರು ರಾಜಕೀಯ ಪ್ರವೇಶ ಮಾಡಿದ್ದರು. 2004 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಗೊಂಡರು. 2008 ರಲ್ಲಿ ಕೂಡ ಮೂರನೇ ಭಾರಿಗೂ ಆಯ್ಕೆಯಾದರು.

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಪಕ್ಷದೊಂದಿಗೆ ವೈಮನಸ್ಸು ಉಂಟಾಗಿ ಪಕ್ಷದಿಂದ ಹೊರ ಬಂದಿದ್ದರು. 2013 ರ ವಿಧಾನಸಭಾ ಚುನಾವಣೆ ಹೊತ್ತಿಗೆ ಬಿಎಸ್​ವೈ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ವನ್ನು ರಾಜ್ಯದಲ್ಲಿ ಸ್ಥಾಪನೆ ಮಾಡಿದ್ದರು. ಅಂದು ಕೆಜೆಪಿಯಿಂದ ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಿ 13000 ಮತಗಳಿಂದ ಕಾಂಗ್ರೆಸ್​ ಅಭ್ಯರ್ಥಿ ಸಿ.ಎಸ್​ ಶಿವಳ್ಳಿ ವಿರುದ್ದ ಸೋಲು ಕಂಡಿದ್ದರು.

2018 ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ 634 ಮತಗಳ ಅಂತರದಿಂದ ಸಿ.ಎಸ್ ಶಿವಳ್ಳಿ ವಿರುದ್ದ ಮತ್ತೊಮ್ಮೆ ಸೋಲಿನ ಕಹಿ ಸವಿದಿದ್ದರು. 2019ರಲ್ಲಿ ಸಿ.ಎಸ್ ಶಿವಳ್ಳಿ ಅಕಾಲಿಕ ಮರಣದಿಂದ ನಡೆದ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ವಿರುದ್ದ 1601 ಅಲ್ಪ ಮತಗಳ ಅಂತರದಿಂದ ಚಿಕ್ಕನಗೌಡರ ಪರಾಭವಗೊಂಡಿದ್ದರು.

ಇದನ್ನೂ ಓದಿ : 2023ರ ಎಕ್ಸಿಟ್​ ಪೋಲ್ಸ್​ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್​ ಹೇಳಿದ್ದವು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.