ಹುಬ್ಬಳ್ಳಿ: ಕಾಂಗ್ರೆಸ್ ಸೋಲಿನ ಹತಾಶೆಯಿಂದ ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದೆ. ಹೀಗಾಗಿ ಕಾಂಗ್ರೆಸ್ ಸೋಲಿನ ಹತಾಶೆಗೆ ಒಳಗಾಗಿ ಆರೋಪ ಮಾಡುತ್ತಿದೆ ಎಂದರು.
ಹಾಗೆ ಚಿಲುಮೆ ಸಂಸ್ಥೆ ಕುರಿತು ಮಾತನಾಡಿದ ಅವರು, ಸಂಸ್ಥೆ ವಿರುದ್ಧ ತನಿಖೆ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಅದರಿಂದ ಈ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ ಎಂದರು. ಜೊತೆಗೆ ಮಂಗಳೂರು ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತನಿಖೆ ನಡೆಸುತ್ತಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯ ಎನ್ನುವುದು ಸುಳ್ಳು. ಕಾಂಗ್ರೆಸ್ನವರು ಆರೋಪಿಸಬೇಕು ಎಂದು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೆ ನಂತರದ ಸಮೀಕ್ಷೆಗಳನ್ನು ಮಾಧ್ಯಮಗಳೇ ಮಾಡುತ್ತವೆ. ಆದರೆ, ಮಾಡಿದ ಸಮೀಕ್ಷೆಗಳು ತಪ್ಪು ಎಂದು ಹೇಳಲಾಗುವುದಿಲ್ಲ. ಸಮೀಕ್ಷೆ ಹೆಸರಿನಲ್ಲಿ ಅಂತಹ ಲೋಪಗಳಾಗಿದ್ದರೇ ಕ್ರಮ ತೆಗೆದುಕೊಳ್ಳಲಿ ಎಂದು ಶೆಟ್ಟರ್ ಹೇಳಿದರು.
ಇದನ್ನೂ ಓದಿ; ಗುಜರಾತ್ ಚುನಾವಣೆ: ಒಂದು ಕೋಟಿಗೂ ಅಧಿಕ ಯುವ ಮತದಾರರು