ETV Bharat / state

ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು 3 ಬಾಗಿಲು: ಪ್ರಹ್ಲಾದ್ ಜೋಶಿ ವ್ಯಂಗ್ಯ

ಇಷ್ಟು ದಿನ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರ ಒಂದು ಗುಂಪು, ಡಿಕೆಶಿ ಬೆಂಬಲಿಗರ ಒಂದು ಗುಂಪು ಎಂದು ಎರಡು ಗುಂಪುಗಳಿದ್ದವು. ಈಗ ಖರ್ಗೆ ಅವರ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಹಾಗಾಗಿ ಕಾಂಗ್ರೆಸ್​ನಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

Prahlad joshi
ಸಚಿವ ಪ್ರಹ್ಲಾದ್ ಜೋಶಿ
author img

By

Published : Oct 28, 2022, 8:07 PM IST

ಧಾರವಾಡ: ಕಾಂಗ್ರೆಸ್​​ನಲ್ಲಿ ಮನೆಯೊಂದು ಎರಡು ಬಾಗಿಲು ಇತ್ತು. ಇದೀಗ ಮೂರು ಬಾಗಿಲು ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

ಇಷ್ಟು ದಿನ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರ ಒಂದು ಗುಂಪು, ಡಿಕೆಶಿ ಬೆಂಬಲಿಗರ ಒಂದು ಗುಂಪು ಎಂದು ಎರಡು ಗುಂಪುಗಳಿದ್ದವು. ಈಗ ಖರ್ಗೆ ಅವರ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಒಂದು ಯಾತ್ರೆ ಮಾಡಲಿ ಎರಡು ಯಾತ್ರೆ ಮಾಡಲಿ, ಮೂರು ಯಾತ್ರೆ ಮಾಡಲಿ ಆದರೆ ಕಾಂಗ್ರೆಸ್ ಸುಧಾರಿಸುವುದಿಲ್ಲ ಎಂದು ಕುಟುಕಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಅವರ ಸ್ಥಿತಿ ದೇಶಾದ್ಯಂತ ನಾವು ನೋಡುತ್ತಿದ್ದೇವೆ. ಈಗಾಗಲೇ ನಾನು ಗುಜರಾತಿಗೆ ಎರಡು ಬಾರಿ ಹೋಗಿ ಬಂದಿದ್ದೇನೆ. ಅವರಿಗೆ ಅಲ್ಲಿ ಅಡ್ರೆಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಎಲ್ಲಾ ಕಡೆ ನಾಪತ್ತೆಯಾಗುತ್ತಿದ್ದಾರೆ. ಇಲ್ಲೂ ಪೂರ್ತಿ ನಾಪತ್ತೆಯಾಗುತ್ತಾರೆ ಎಂದರು.

ಹಿಂದಿ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅಮಿತ್ ಶಾ ಈ ಬಗ್ಗೆ ಒಂದು ಆರ್ಟಿಕಲ್ ಬರೆದಿದ್ದಾರೆ. ಭಾರತ ಸರ್ಕಾರ ಎನ್ಇಪಿಯಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಎಲ್ಲಾ ಕೋರ್ಸ್​ ಆಯಾ ಭಾಷೆಯಲ್ಲಿ ಇರಬೇಕು ಎಂದಿದೆ. ರವೀಂದ್ರನಾಥ ಠಾಗೋರ್ ಅವರು 'ಭಾರತದ ಭಾಷೆಗಳು ಒಂದು ಕಮಲ ಇದ್ದಂತೆ. ಎಲ್ಲಾ ಭಾಷೆಗಳು ಕಮಲದ ದಳಗಳಾದರೆ, ಹಿಂದಿ ಅದರ ಮಧ್ಯದಲ್ಲಿದೆ. ದಳಗಳಿಲ್ಲದೆ ಕಮಲ ಹೂವಾಗುದಿಲ್ಲ. ಹಾಗಾಗಿ ನಾವು ಎಲ್ಲಾ ರಾಜ್ಯಗಳಿಗೆ ಅನುಮತಿ ಕೊಟ್ಟಿದ್ದೇವೆ ಎಂದರು.

ಕೆಲವರಿಗೆ ಮಾಡಲು ಕೆಲಸವಿಲ್ಲ. ಹಿಂದಿ ಹೇರಿಕೆ ನೆಪದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಇಂಗ್ಲಿಷ್​​ಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ನೆಪದಲ್ಲಿ ಕನ್ನಡ ಭಾಷೆ ಬೆಳೆಯಲು ಬಿಡುತ್ತಿಲ್ಲ ಎಂದು ದೂರಿದರು.

ಇದನ್ನೂ ಓದಿ: ಬಿಜೆಪಿಗರು ಆದಷ್ಟು ಬೇಗ ಮುಹೂರ್ತ ಪಿಕ್ಸ್​ ಮಾಡಲಿ, ಯಾರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುತ್ತದೆ: ಡಿ.ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.