ಹುಬ್ಬಳ್ಳಿ: ಕೊರೊನಾ ಸೋಂಕು ಹಿನ್ನೆಲೆ ಕಾನೂನು ವಿಶ್ವವಿದ್ಯಾಲಯ ಆನ್‍ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದನ್ನು ಖಂಡಿಸಿ ಆಗಸ್ಟ್ 24ರಂದು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹ್ಯೂಮ್ಯಾನಿಟಿ ಫೌಂಡೇಶನ್ ಅಧ್ಯಕ್ಷೆ ಸ್ವಾತಿ ಮಾಳಗಿ ಹೇಳಿದರು.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಆನ್‍ಲೈನ್ ಶಿಕ್ಷಣ ಮತ್ತು ಆನ್‍ಲೈನ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರ ಜೊತೆಗೆ ಮುಂಗಡವಾಗಿ ಮುಂದಿನ ಸೆಮಿಸ್ಟರ್ ಹಣ ಪಾವತಿ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹಾಕುತ್ತಿರುವುದು ಕಂಡು ಬಂದಿದೆ. ಇದು ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದರು.
ಕೇವಲ ಶೇ. 33ರಷ್ಟು ಕುಟುಂಬಗಳು ಮಾತ್ರ ಅಂತರ್ಜಾಲ ಸೌಲಭ್ಯ ಹೊಂದಿರುವ ಈ ದೇಶದಲ್ಲಿ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆ ಎಂಬುದು ಮೂಲದಲ್ಲಿ ಶಿಕ್ಷಣ ವಿರೋಧಿ ನಿರ್ಧಾರವಾಗಿದೆ. ಕೂಡಲೆ ಆನ್‍ಲೈನ್ ಪರೀಕ್ಷೆ ಕೈ ಬಿಡಬೇಕು ಮತ್ತು ಮುಂದಿನ ಸೆಮಿಸ್ಟರ್ ಪ್ರವೇಶಾತಿ ಹಣ ಕಟ್ಟಲು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.