ETV Bharat / state

ಸಚಿವ ಮುನೇನಕೊಪ್ಪ ಆಗಮನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ: 200 ಜನರ ವಿರುದ್ಧ ಪ್ರಕರಣ ದಾಖಲು - ಹುಬ್ಬಳ್ಳಿಯಲ್ಲಿ 200 ಜನರ ವಿರುದ್ಧ ಪ್ರಕರಣ ದಾಖಲು

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪನವರು ಸಚಿವರಾದ ಬಳಿಕ ಹುಬ್ಬಳ್ಳಿಗೆ ಆಮಿಸಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿ ಅದ್ಧೂರಿಯಾಗಿ ಸಚಿವರಿಗೆ ಸ್ವಾಗತ ಕೋರಿದ್ದರು. ಈ ಸಂಬಂಧ 200 ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಾಗಿದೆ.

Complaint against near 200 people due to break the covid rules in Hubli
ಸಚಿವ ಮುನೇನಕೊಪ್ಪ ಆಗಮನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ
author img

By

Published : Aug 18, 2021, 3:20 PM IST

ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೊದಲ ಬಾರಿಗೆ ಸಚಿವರಾಗಿ ನಗರಕ್ಕೆ ಆಗಮಿಸಿದ್ದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ಸ್ವಾಗತಿಸಿದ ಆರೋಪದಡಿ 200 ಬಿಜೆಪಿ ಕಾರ್ಯಕರ್ತರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಮುನೇನಕೊಪ್ಪ ಆಗಮನದ ವೇಳೆ ಕೋವಿಡ್ ನಿಯಮ ಉಲ್ಲಂಘನೆ

ಎಪಿಎಂಸಿ ಈಶ್ವರ ನಗರದ ಸಂತೋಷ ಹಿರೇಮಠ, ಮಂಜುನಾಥ ಹೆಬಸೂರ, ಕರಣ ದುಂಡಿ, ಆನಂದ ಹಡಪದ, ಮಲ್ಲಿಕಾರ್ಜುನ ಹಿರೇಮಠ, ಹರೀಶ ಹಳ್ಳಿಕೇರಿ, ಶಿವರಾಜ ದೊಡ್ಡಮನಿ, ಕಾರ್ತಿಕ ನಾಯ್ಡು, ನಾಗೇಶ ಕಲ್ಲಪ್ಪ, ಚನ್ನಬಸು ಪಾಟೀಲ, ಶರತ ಅಂಗಡಿ ಸೇರಿದಂತೆ 150 ರಿಂದ 200 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಕೆಲ ದಿನಗಳ ಹಿಂದೆ ಸಚಿವರಾದ ಬಳಿಕ ಶಂಕರ ಪಾಟೀಲ ಮುನೇನಕೊಪ್ಪನವರು ನಗರಕ್ಕೆ ಆಮಿಸಿದ್ದರು. ಈ ವೇಳೆ, ವಿಮಾನ ನಿಲ್ದಾಣದ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಗುಂಪು ಸೇರಿದ್ದರು. ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸರು 200 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಬರೆ: ಅಡುಗೆ ಸಿಲಿಂಡರ್‌ ಬೆಲೆಯಲ್ಲಿ 25 ರೂ.ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.