ETV Bharat / state

ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣ: ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ

ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್​​ ಪಟದಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹ ಕಿಮ್ಸ್​​ನ ಶವಗಾರದಲ್ಲಿದ್ದು, ಎರಡು ಕುಟುಂಬಗಳು ಶವಕ್ಕಾಗಿ ಪೈಪೋಟಿ ನಡೆಸುತ್ತಿವೆ.

Pushpa Patadari Suicide Case
ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ
author img

By

Published : Sep 29, 2022, 2:33 PM IST

Updated : Sep 29, 2022, 4:17 PM IST

ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಪಟದಾರಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಮೃತದೇಹವನ್ನು ನೀಡುವಂತೆ, ಎರಡು ಕುಟುಂಬಗಳು ಪಟ್ಟು ಹಿಡಿದಿರುವ ಘಟನೆ ನಗರದ ಕಿಮ್ಸ್ ಶವಗಾರದ ಮುಂದೆ ನಡೆದಿದೆ.

ದೀಪಕ್​ ಕೊಲೆ ಪ್ರಕರಣವನ್ನು ಸಿಐಡಿ ವಿಚಾರಣೆ ನಡೆಸುತ್ತಿರುವಾಗಾಲೇ, ಪುಷ್ಪಾ ಬುಧವಾರ ನವನಗರದ ತಮ್ಮ ಸಂಬಂಧಿ ನಿವಾಸದಲ್ಲಿ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇಂದು ದೀಪಕ್ ಪಟದಾರಿ ಕುಟುಂಬ ಹಾಗೂ ಪುಷ್ಪಾ ಅವರ ತಂದೆ ಬಸಪ್ಪ ಮಗಳ ಶವ ನೀಡುವಂತೆ ಪೊಲೀಸರಿಗೆ ಬೇಡಿಕೆ ಇಟ್ಟಿದ್ದಾರೆ‌.

ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ

ಆದರೆ ಪುಪ್ಪಾ ತಂದೆ ತಮ್ಮ ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಪ್ರಕರಣ ದಾಖಲಿಸಿರುವ ಹಿನ್ನೆಲೆ ಶವ ನೀಡಲು ಪೊಲೀಸರು ನಿರಾಕರಿಸಿದ್ದಾರೆ.‌ ಇನ್ನೂ ನಮ್ಮ ಸಹೋದರನ‌ ಕೊಲೆ ಮಾಡಿದವರಿಗೆ ಶವ ನೀಡಬಾರದು ಎಂದು ದೀಪಕ್ ಸಹೋದರ ಸಂಜಯ ಪಟದಾರಿ ಪಟ್ಟು ಹಿಡಿದ್ದಾರೆ. ಕಿಮ್ಸ್​ನ ಶವಾಗಾರದಲ್ಲಿ ಪುಪ್ಪಾ ಮೃತದೇಹವಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

ಇದನ್ನೂ ಓದಿ: ಸಿಐಡಿ ತನಿಖೆ ನಡುವೆಯೇ ಗ್ರಾಪಂ ಸದಸ್ಯ ದೀಪಕ್​ ಪಟದಾರಿ‌ ಪತ್ನಿ ಆತ್ಮಹತ್ಯೆ

ಜುಲೈ 04 ರಂದು ದೀಪಕ್ ಪಟದಾರಿ ಕೊಲೆಯಾಗಿತ್ತು. ಶವಾಗಾರದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ಶವಾಗಾರದ ಎದುರು KSRP ನಿಯೋಜನೆ ಮಾಡಲಾಗಿದೆ.

Last Updated : Sep 29, 2022, 4:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.