ಹುಬ್ಬಳ್ಳಿ: ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಗ್ರಾಮದ ಹೊರವಲಯದ ಕೆರೆಗೆ ಜಿಗಿದು ಪ್ರಾಣ ಬಿಟ್ಟ ಘಟನೆ ತಾಲೂಕಿನ ಯಲಿವಾಳ ಗ್ರಾಮದಲ್ಲಿ ನಡೆದಿದೆ.

ಯಲಿವಾಳ ಗ್ರಾಮದ ನಿವಾಸಿ ಗುರುಸಿದ್ದಪ್ಪ ಗದಿಗೆಪ್ಪ ಕಮ್ಮಾರ (45) ಮೃತ ವ್ಯಕ್ತಿ. ಮನೆಯಲ್ಲಿ ಹಣ ಹಾಗೂ ಬ್ಯಾಂಕ್ ಪಾಸ್ ಬುಕ್ ಕೇಳಿದಾಗ, ಮನೆಯವರು ನೀಡಲು ನಿರಾಕರಿಸಿದ್ದಾರೆ. ಮಧ್ಯಾಹ್ನ ಕೆರೆ ಬಳಿ ಹೋದವನು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.