ETV Bharat / state

ಸದ್ಯಕ್ಕೆ ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಿಲ್ಲ: ಯೂಟರ್ನ್ ಹೊಡೆದ ಸಿಎಂ ಇಬ್ರಾಹಿಂ.. - cm ibrahim statement on congress

ಹೈಕಮಾಂಡ್ ಜೊತೆ ಮಾತನಾಡಿದ ನಂತರ ಮತ್ತೆ ನಮ್ಮ‌ ಮುಖಂಡರ ಜೊತೆ ಸಭೆ ಮಾಡುತ್ತೇನೆ. ನನ್ನನ್ನ ಪಕ್ಷದಲ್ಲಿ ಉಳಿಸಿಕೊಳ್ಳೋಕೆ ಮನಸ್ಸಿದೆಯೋ, ಇಲ್ಲವೋ ಅವರನ್ನೇ ಕೇಳಿ. ಹೈಕಮಾಂಡ್‌ನವರು ಏನು ಹೇಳ್ತಾರೆ ನೋಡೋಣ. ಅದರ ನಂತರ ನಾನು ಮುಖಂಡರ ಸಭೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಯೂಟರ್ನ್ ಹೊಡೆದಿದ್ದಾರೆ..

cm-ibrahim-statement-on-congress
ಪರಿಷತ್ ಸದಸ್ಯ ಸಿಎಂ‌ ಇಬ್ರಾಹಿಂ
author img

By

Published : Feb 13, 2022, 7:03 PM IST

ಹುಬ್ಬಳ್ಳಿ : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸದ್ಯಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಪರಿಷತ್ ಸದಸ್ಯ ಸಿಎಂ‌ ಇಬ್ರಾಹಿಂ ಯೂಟರ್ನ್ ಹೊಡೆದಿದ್ದಾರೆ.

ಕಾಂಗ್ರೆಸ್‌ ಪರಿಷತ್ ಸದಸ್ಯ ಸಿಎಂ‌ ಇಬ್ರಾಹಿಂ ಮಾತನಾಡಿರುವುದು..

ಹುಬ್ಬಳ್ಳಿಯಲ್ಲಿ ಆಪ್ತರ ಸಭೆಯ ಬಳಿಕ ಮಾತನಾಡಿದ ಅವರು, ನಾಳೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡೋದಾಗಿ ಹೇಳಿಕೆ ನೀಡಿದ್ದರು. ಆದ್ರೆ, ಸದ್ಯಕ್ಕೆ ನಾಳೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್‌ನ ಹೈಕಮಾಂಡ್​ನಿಂದ ನನಗೆ ಬುಲಾವ್ ಬಂದಿದೆ ಎಂದರು.

ಹೈಕಮಾಂಡ್ ಜೊತೆ ಮಾತನಾಡಿದ ನಂತರ ಮತ್ತೆ ನಮ್ಮ‌ ಮುಖಂಡರ ಜೊತೆ ಸಭೆ ಮಾಡುತ್ತೇನೆ. ನನ್ನನ್ನ ಪಕ್ಷದಲ್ಲಿ ಉಳಿಸಿಕೊಳ್ಳೋಕೆ ಮನಸ್ಸಿದೆಯೋ, ಇಲ್ಲವೋ ಅವರನ್ನೇ ಕೇಳಿ. ಹೈಕಮಾಂಡ್‌ನವರು ಏನು ಹೇಳ್ತಾರೆ ನೋಡೋಣ. ಅದರ ನಂತರ ನಾನು ಮುಖಂಡರ ಸಭೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಯೂಟರ್ನ್ ಹೊಡೆದಿದ್ದಾರೆ.

ಕಾಂಗ್ರೆಸ್ ಪಕ್ಷದವರು ಒಂದು ಕಡೆ ಬೈಯೋದು, ಒಂದು ಕಡೆ ತೆಗಳೋದು ಮಾಡಿಸುತ್ತಿದ್ದಾರೆ. ಉಗ್ರಪ್ಪ ಅವರ ಕಡೆಯಿಂದ ಭ್ರಷ್ಟಾಚಾರದ ಆರೋಪ ಮಾಡಿಸುತ್ತಿದ್ದಾರೆ. ವಕ್ಫ್ ಬೋರ್ಡ್‌ನಲ್ಲಿ ಭ್ರಷ್ಟಾಚಾರ ಮಾಡಿರೋದಾಗಿ ಹೇಳುತ್ತಿದ್ದಾರೆ‌. ಈಗ ಬಿಜೆಪಿ ಸರ್ಕಾರ ಇದೆ. ನನ್ನ ಮೇಲೆ ತನಿಖೆ ಮಾಡಿಸಲಿ.

ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ ಎಂದು ಉಗ್ರಪ್ಪನವರನ್ನ ನಾಯಿಗೆ ಹೋಲಿಸಿ ಕಿಡಿಕಾರಿದರು. ಜಮೀರ್ ಅಹ್ಮದ್ ಹೇಳೋದು ಒಂತರ, ಮಹದೇವಪ್ಪ ಮನೆಗೆ ಬಂದಿದ್ರು, ಸಿದ್ದರಾಮಯ್ಯ ಕರೆ ಮಾಡಿದ್ರು. ನಾವೇನೂ ಇಲ್ಲ ಅಂದಮೇಲೆ ನಮ್ಮನ್ನ ನಮ್ಮ ಪಾಡಿಗೆ ಬಿಟ್ಟು ಬಿಡಬೇಕು. ಬೇಡ ಜಂಗಮರ ರೀತಿ ಹೊರಟು ಬಿಡುತ್ತೇವೆ ಎಂದರು.

ಸದ್ಯಕ್ಕೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ. ಮತಾಂತರ ಮಸೂದೆ ಪರಿಷತ್​​ನಲ್ಲಿ ಮಂಡನೆ ಆಗುವುದಿದೆ. ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಬರುತ್ತೆ. ನನ್ನ ರಾಜೀನಾಮೆಯಿಂದ ಬಿಜೆಪಿಗೆ ಲಾಭ ಆಗುತ್ತೆ. ಹೀಗಾಗಿ, ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಓದಿ: ಹಿಜಾಬ್ ಹಾಕೋದು ಅವರ ಹಕ್ಕು.. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ವಿಚಾರ ಬಳಸಿಕೊಳ್ಳುತ್ತಿದೆ.. ಜಮೀರ್ ಅಹ್ಮದಖಾನ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.