ಹುಬ್ಬಳ್ಳಿ : ಹಿಜಾಬ್ ಹಾಕಿಕೊಳ್ಳೋದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹಿಂದೂಗಳ ಮಹಿಳೆಯರು ಸೀರೆ ಸೆರಗನ್ನು ಹಾಕಿಕೊಳ್ಳುತ್ತಾರೋ ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಹಾಕಿಕೊಳ್ಳುತ್ತಾರೆ.
ಹೆಣ್ಣುಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳಬಾರದು ಅಂತಾ ಪ್ರಪಂಚದಲ್ಲಿ ಎಲ್ಲೂ ಹೇಳಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನ ಮಗನೆ ನೇ ಕೇಸರಿ ಶಾಲು ಹಂಚೋ ಕೆಲಸ ಮಾಡಿದ್ದಾನೆ. ಇನ್ನು ಈಶ್ವರಪ್ಪ ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡುತ್ತಾರೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಲಗಿದ್ದಾರಾ, ಪೊಲೀಸ್ ಮಹಾನಿರ್ದೇಶಕರು ನಿದ್ದೆ ಮಾಡುತ್ತಿದ್ದಾರಾ?, ಯಾಕೆ ಈಶ್ವರಪ್ಪನವರ ಮೇಲೆ ಕೇಸ್ ಹಾಕಿಲ್ಲ.
ಪ್ರಧಾನಿ ಬಿಟ್ಟರೆ ಬೇರೆ ಯಾರೂ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸಲ್ಲ. ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಯೊಬ್ಬ ಈ ರೀತಿ ಮಾತನಾಡಿದರೆ ಸಿಎಂ ಏನು ಮಾಡುತ್ತಿದ್ದಾರೆ. ಏ ಬೊಮ್ಮಣ್ಣ, ಎಲ್ಲಿದಿಯಾ, ಏನ್ ಮಾಡ್ತಿದಿಯಾ ಎಂದು ಸಿಎಂ ವಿರುದ್ಧ ಹರಿಹಾಯ್ದುರು.
ಈಶ್ವರಪ್ಪ ವಿರುದ್ಧ ಸಿಎಂ ಕ್ರಮ ಕೈಗೊಳ್ಳದಿದ್ದರೆ ನಾವೇ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹ ಮಾಡುತ್ತೇವೆ. ರಾಮ ಮಂದಿರ, ಗೋಹತ್ಯೆ ನಿಷೇಧ ಆಯ್ತು ಅವೆಲ್ಲ ದುಖಾನ್ ಬಂದ್ ಆಗಿವೆ. ಈಗ ಹಿಜಾಬ್ ದುಖಾನ್ ಶುರುವಾಗಿದೆ.
ಹಿಜಾಬ್ ವಿಚಾರದಲ್ಲಿ ಯಡಿಯೂರಪ್ಪನವರು ಮಧ್ಯೆ ಪ್ರವೇಶ ಮಾಡಬೇಕು. ಹಿಜಾಬ್ ವಿಚಾರವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಇಲ್ಲವಾದಲ್ಲಿ 2023 ರಲ್ಲಿ ಸೋತ ಮೇಲೆ ಬಿಜೆಪಿಯವರಿಗೆ ಇದೇ ಹಿಜಾಬಿನಲ್ಲಿ ಮುಖ ಮುಚ್ಚಿಕೊಂಡು ಹೋಗಲು ನೆರವಾಗುತ್ತದೆ ಎಂದರು.
ಇದನ್ನೂ ಓದಿ: ಸದ್ಯಕ್ಕೆ ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ: ಯೂಟರ್ನ್ ಹೊಡೆದ ಸಿಎಂ ಇಬ್ರಾಹಿಂ..