ETV Bharat / state

ಸಿಎಂ ಹೋಮ-ಹವನ ಲೋಕ ಕಲ್ಯಾಣಕ್ಕಲ್ಲ, ಅವ್ರ ಕುಟುಂಬದ ಕಲ್ಯಾಣಕ್ಕೆ: ಶೆಟ್ಟರ್ - undefined

ಮುಖ್ಯಮಂತ್ರಿ ಅವರ ಹೋಮ-ಹವನ, ದೇವಸ್ಥಾನಗಳ ಭೇಟಿಯನ್ನು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಟೀಕಿಸಿದ್ದಾರೆ. ಇದೆ ವೇಳೆ ಸಂಸದ ಪ್ರಹ್ಲಾದ ಜೋಶಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮಿಶ್ರ ಸರ್ಕಾರ ವಿರುದ್ಧ ಗುಡಿಗಿದರು.
author img

By

Published : May 7, 2019, 1:31 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದ್ದು, ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಆರೋಪಿಸಿದ್ದಾರೆ.

883 ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಬಸವಣ್ಣನ ಮೂರ್ತಿಗೆ ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹೋಮಹವನ, ದೇವಸ್ಥಾನದ ಓಡಾಟ ನಿಲ್ಲಿಸಿ ಜನರ ಸಮಸ್ಯೆಗಳನ್ನು ಆಲಿಸಿ ಬರ ನಿರ್ವಹಣೆಗೆ ಮುಂದಾಗಲಿ ಎಂದು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಕುಮಾರಸ್ವಾಮಿಯವರು ಹೋಮ ಮಾಡಿಸುತ್ತಿರುವುದು ಲೋಕ ಕಲ್ಯಾಣಕ್ಕಲ್ಲ, ಬದಲಾಗಿ ಅವರ ಕುಟುಂಬದ ಕಲ್ಯಾಣಕ್ಕೆ. ಮಗ ಸೋಲುತ್ತಾನೆ ಎನ್ನುವ ಭಯದಲ್ಲಿ ದೇವರ ಮೊರೆ ಹೋಗಿದ್ದಾರೆ. ಹೋಮ ಮಾಡಿಸುವುದರಿಂದ ಇವಿಎಂ ಮಷಿನ್‌ನಲ್ಲಿನ ಮತಗಳು ಬದಲಾಗುತ್ತವೆಯೇ ಎಂದು ಶೆಟ್ಟರ್​ ವ್ಯಂಗ್ಯವಾಡಿದರು.

ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಮೃತರ ಬಗ್ಗೆ ಅನುಕಂಪದ‌ ಮಾತುಗಳನ್ನಾಡಿದ್ದೇವೆ. ಅಷ್ಟಕ್ಕೆ ಶಿವಳ್ಳಿ ಕುಟುಂಬಕ್ಕೆ ಬಿಜೆಪಿ ಬೆಂಬಲಿಸಲಿ ಎಂದು ಡಿ.ಕೆ. ಶಿವಕುಮಾರ್​ ಹೇಳುತ್ತಿದ್ದಾರೆ‌. ಅವರಿಗೆ ಕಾಮನ್‌ಸೆನ್ಸ್ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ನಾಯಕರು ಒಂದು ಸಮುದಾಯದ ಅಭ್ಯರ್ಥಿಗೆ ಮತಕೊಡಿ ಅಂದಿದ್ದರು. ಈಗ ಕುಂದಗೋಳ ಕ್ಷೇತ್ರದಲ್ಲಿ ಯಾರಿಗೆ ಮತ ಕೇಳುತ್ತಾರೆ ಎಂದು ಶೆಟ್ಟರ್​ ಪ್ರಶ್ನಿಸಿದರು.

ಕಾಂಗ್ರೆಸ್​ ಹಗರಣಗಳ ಬಗ್ಗೆ ಮಾತನಾಡಿದ್ರೆ ಕೈ ನಾಯಕರಿಗೆ ಸಿಟ್ಟು ಬರುತ್ತೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜೀವ್ ಗಾಂಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದಕ್ಕೆ ಕಾಂಗ್ರೆಸ್‌ನವರು ಮೈ ಪರಚಿಕೊಳ್ಳುತ್ತಿದ್ದಾರೆ. ಸ್ಪಷ್ಟ ಆರೋಪವಿದ್ದ ಬೋಫೋರ್ಸ್ ಹಗರಣದ ಬಗ್ಗೆ ಮಾತನಾಡಿದ್ರೆ ಇವರಿಗೆ ಸಿಟ್ಟು ಬರುತ್ತೆ. ಕಾಂಗ್ರೆಸ್ ಪಕ್ಷ ಅಂದರೆ ಹಗರಣಗಳ ಪಕ್ಷ. ಭಾರತ ಭ್ರಷ್ಟಾಚಾರದೊಳಗೆ ಸಿಕ್ಕು ನಲುಗಲು ಕಾಂಗ್ರೆಸ್ ಕಾರಣ ಎಂದು ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ವಿರುದ್ಧ ಸಂಸದ ಜೋಶಿ ಕಿಡಿ

ವಿಶ್ವ ಗುರು ಬಸವಣ್ಣನವರ ಜಯಂತಿ ಅಂಗವಾಗಿ ನಗರದ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದರು. ಅವರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅವರು ಕ್ಷಮೆ ಕೇಳದಿದ್ದಕ್ಕೆ ನೋಟಿಸ್ ನೀಡಲಾಗಿದೆ. ದೇಶದಲ್ಲಿ ನಕಲಿ ಗಾಂಧಿಗಳಿಂದಾಗಿ ದೇಶ ಭ್ರಷ್ಟಾಚಾರದಲ್ಲಿ ಮುಳುಗಿತು. ಈ ಹಿಂದೆ ಸಿದ್ದರಾಮಯ್ಯ ರಾಜೀವ್, ರಾಹುಲ್, ಸೋನಿಯಾ ಗಾಂಧಿ ಬಗ್ಗೆ ನಿಂದಿಸಿದ್ದರು. ಮುಖ್ಯಮಂತ್ರಿ ಸ್ಥಾನ ಕರುಣಿಸಿದ್ದಕ್ಕೆ ಗುಲಾಮರಂತೆ ಅವರ ಮಾತು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ ಎಂದು ಜರಿದರು.

ಚುನಾವಣಾ ಆಯೋಗ ಬರ ನಿರ್ವಹಣೆಗೆ ಅಭ್ಯಂತರ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಸಿಎಂ ಮತ್ತು ಡಿಸಿಎಂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ತಮ್ಮ ಮಕ್ಕಳು ಗೆಲ್ಲುತ್ತಾರೋ ಇಲ್ಲವೋ, ಸರ್ಕಾರ ಉಳಿಯುತ್ತೋ ಇಲ್ಲವೋ, ತಾವು ಉಳಿಯುತ್ತಾರೋ ಇಲ್ಲವೋ, ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ. ತನ್ನನ್ನು ಕಿತ್ತೆಸೆಯಲು ಸಿದ್ದರಾಮಯ್ಯ ಏನು ಪ್ಲಾನ್​ ಮಾಡುತ್ತಿದ್ದಾರೆ ಅನ್ನೋದೆ ಕುಮಾರಸ್ವಾಮಿಯವರ ಚಿಂತೆಯಾಗಿದೆ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.

Intro:ಹುಬ್ಬಳಿBody:ಸ್ಲಗ್:- ಸಮ್ಮಿಶ್ರಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್.

ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದ್ದು, ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಹೋಮಹವನ, ದೇವಸ್ಥಾನದ ಓಡಾಟ ನಿಲ್ಲಿಸಿ ಜನರ ಸಮಸ್ಯೆಗಳನ್ನು ಆಲಿಸಿ ಬರ ನಿರ್ವಹಣೆಗೆ ಮುಂದಾಗಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮಿಶ್ರ ಸರ್ಕಾರ ವಿರುದ್ಧ ಗುಡಿಗಿದರು.

883 ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಬಸವಣ್ಣನ ಮೂರ್ತಿಗೆ ಮಾಲರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಹೋಮ ಮಾಡಿಸುತ್ತಿರುವುದು ಲೋಕ ಕಲ್ಯಾಣಕ್ಕಲ್ಲ, ಕುಟುಂಬದ ಕಲ್ಯಾಣಕ್ಕೆ. ಮಗ ಸೋಲುತ್ತಾನೆ ಎನ್ನುವ ಭಯದಲ್ಲಿ ದೇವರ ಮೊರೆ ಹೋಗಿದ್ದಾರೆ. ಹೋಮ ಮಾಡಿಸುವುದರಿಂದ ಇವಿಎಂ ಮಷಿನ್‌ನಲ್ಲಿನ ಮತಗಳು ಚೇಂಜ್ ಆಗುತ್ತದೆಯೇ ಎಂದು ವ್ಯಂಗ್ಯವಾಡಿದರು.ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಸತ್ತವರ ಬಗ್ಗೆ ಅನುಕಂಪದ‌ ಮಾತನಾಡಿದ್ದೇವೆ ಅಷ್ಟಕ್ಕೆ ಶಿವಳ್ಳಿ ಕುಟುಂಬಕ್ಕೆ ಬಿಜೆಪಿ ಬೆಂಬಲಿಸಲಿ ಎಂದು ಡಿ.ಕೆ.ಶಿವಕುಮಾರ ಹೇಳುತ್ತಿದ್ದಾರೆ‌. ಅವರಿಗೆ ಕಾಮನ್‌ಸೆನ್ಸ್ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ನಾಯಕರು ಲಿಂಗಾಯತರಿಗೆ ಮತಕೊಡಿ ಅಂದಿದ್ದರು. ಈಗ ಕುಂದಗೋಳ ಕ್ಷೇತ್ರದಲ್ಲಿ ಯಾರಿಗೆ ಮತ ಕೇಳುತ್ತಾರೆ? ಎಸ್ ಐ ಚಿಕ್ಕನಗೌಡ್ರ ಸಹ ಲಿಂಗಾಯತರು ಅವರೇ ಹೇಳಲಿ ಈಗ ಎಂದು ಮರುಪ್ರಶ್ನೆ ಹಾಕಿದರು.

________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.