ETV Bharat / state

ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತನೇ ಎಂಬುದನ್ನು ಪರಿಶೀಲಿಸಲು ಸೂಚಿಸಿದ್ದೇನೆ: ಸಿಎಂ ಬೊಮ್ಮಾಯಿ - santro ravi bip worker

ಹುಬ್ಬಳ್ಳಿ ಧಾರವಾಡದಲ್ಲಿ ಇಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇಂದಿನಿಂದ ಜ.16ರವರೆಗೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಮಾತನಾಡಿದರು.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
author img

By

Published : Jan 12, 2023, 12:49 PM IST

ಹುಬ್ಬಳ್ಳಿ: ಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ಹೋಗಿದೆ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಹೌದೋ ಅಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡುವುದಕ್ಕೆ ಹೇಳಿರುವೆ. ಕಾಂಗ್ರೆಸ್​​ನಲ್ಲಿ ಎಂತವರು ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸಂಸ್ಕೃತಿ ಆರಂಭವಾಗಿದ್ದೇ ಕಾಂಗ್ರೆಸ್​​ನಿಂದ. ಕಾಂಗ್ರೆಸ್​​ನವರು ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಟ್ವೀಟ್​​ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಗೊತ್ತಿಲ್ಲ. ನಾನು ಫ್ಲೈಟ್​​ನಲ್ಲಿದ್ದೆ. ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಬಿಜೆಪಿಯಲ್ಲಿ ಮಾತ್ರ ಇಂತಹ ತಲೆಹಿಡುಕರು ಇರೋಕೆ ಸಾಧ್ಯ ಅಂತಾ ದಿನೇಶ ಗುಂಡುರಾವ್ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​​ನಲ್ಲಿ ಎಂತವರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಬೇಕು. ಕಾಂಗ್ರೆಸ್​​ನವರು ಹತಾಶರಾಗಿದ್ದಾರೆ. ಅದಕ್ಕೆ ಉಚಿತ ಯೋಜನೆಗಳ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುವ ಕನಸು ಕಂಡಿದೆ ಎಂದು ವಾಗ್ದಾಳಿ ನಡೆಸಿದರು.

ಯುವಜನೋತ್ಸವ ಸಮಾರಂಭಕ್ಕೆ ಮೋದಿ ಆಗಮಿಸುತ್ತಿರುವುದು ಸಂತೋಷದ ಸಂಗತಿ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ. ಜನಸಂಖ್ಯೆ ದೇಶಕ್ಕೆ ಮಾರಕ ಅಂತ ನಾವೆಲ್ಲ ಮಾತನಾಡುತ್ತಿದ್ದೆವು. ಆದ್ರೆ ಅದೇ ಜನರಿಗೆ ಮತ್ತು ಯುವಕರಿಗೆ ಕೌಶಲ್ಯ ತರಬೇತಿ ನೀಡಿದರೇ ದೇಶ ಕಟ್ಟಬಹುದು ಎಂದು ಪ್ರಧಾನಿ ಮೋದಿ ಸಾಧಿಸಿ ತೋರಿಸಿದ್ದಾರೆ. ನೂತನ ಶಿಕ್ಷಣ ನೀತಿಯಿಂದ ಮೂರೇ ವರ್ಷದಲ್ಲಿ 2 ಡಿಗ್ರಿ ತೆಗೆದುಕೊಳ್ಳಬಹುದು. ಹಲವು ವಿಶೇಷ ಕಾರ್ಯಕ್ರಮಗಳನ್ನು ಪ್ರಧಾನಿ ಕೊಟ್ಟಿದ್ದಾರೆ. ಯುವಕರಿಗೆ ಮುದ್ರಾ ಯೋಜನೆ, ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಮೂಲಕ ಯುವಕರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಮೋದಿಯವರು ಬರುತ್ತಿರುವುದರಿಂದ ನಮ್ಮೆಲ್ಲರಿಗೂ ಸಂತೋಷವಾಗಿದೆ ಮತ್ತು ಯುವಕರಲ್ಲಿ ಉತ್ಸಾಹ ಹೆಚ್ಚಲಿದೆ. ಯುವಜನೋತ್ಸವ ಯಶಸ್ವಿಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಸಿಎಂ ಹೇಳಿದರು.

ಯುವಜನೋತ್ಸವಕ್ಕೆ ಸಂಜೆ ಚಾಲನೆ: ಸ್ವಾಮಿ ವಿವೇಕಾನಂದರ ಜನ್ಮದಿನ ಹಿನ್ನೆಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಹುಬ್ಬಳ್ಳಿ ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ವಿದ್ಯಾನಗರಿ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಜೆ 4 ಗಂಟೆಗೆ ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಯುವಜನೋತ್ಸವಕ್ಕೆ ಚಾಲನೆ ನೀಡುವರು. ಸುಮಾರು 25 ಸಾವಿರ ಯುವಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯಿಂದ ಯುವಜನೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ಧಾರವಾಡದ ಕೆಸಿಡಿ ಮೈದಾನದಲ್ಲಿಯೂ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ಗುಂಡೂರಾವ್ ಟ್ವೀಟ್: ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ ಬಿಜೆಪಿಯವರಿಗೆ ಸಲ್ಲಿಸಿದ 'ಸೇವೆ'ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ? ಸ್ಯಾಂಟ್ರೋ ರವಿ ಬಂಧನ ಯಾವಾಗ? ಸ್ಯಾಂಟ್ರೋ ರವಿಯಂತಹ ಪಿಂಪ್‌ BJP ಕಾರ್ಯಕರ್ತ, ಮತ್ತೊಂದು ಕಡೆ‌ ನಟೋರಿಯಸ್ ರೌಡಿ‌ ಶೀಟರ್‌ಗಳನ್ನು, ಪೋಲಿ‌ ಪುಡಾರಿಗಳನ್ನು BJPಯವರೇ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಬಿಜೆಪಿಯವರು ನೈತಿಕತೆಯ ಬಗ್ಗೆ‌ ನೀತಿ ಪಾಠ ಮಾಡುವುದು ದೆವ್ವದ ಬಾಯಲ್ಲಿ ಸುಪ್ರಭಾತ ಕೇಳಿದಂತೆ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದರು.

ಬಿಜೆಪಿಗೆ ಜನ 'ಬ್ಲ್ಯೂ'ಜೆಪಿ ಎನ್ನುವುದು ಇದೇ ಕಾರಣಕ್ಕಾಗಿಯೇ? ನಾನು BJP ಕಾರ್ಯಕರ್ತ ಎಂದು ಸ್ಯಾಂಟ್ರೋ ರವಿಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು ಬಿಜೆಪಿಯಲ್ಲಿ ಮಾತ್ರ ಇರಲು ಸಾಧ್ಯ. ಲಂಪಟರು, ನುಂಗಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ ಬಿಜೆಪಿ ತುಂಬಿ ತುಳುಕುತ್ತಿದೆ. ಇಂತಹ ಭಂಡ ಬಿಜೆಪಿಯವರಿಗೆ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ? ಎಂದು ಟ್ವೀಟ್​ನಲ್ಲಿ ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸಿದ್ದರು.

ಇದನ್ನೂಓದಿ: ಸ್ಯಾಂಟ್ರೋ ರವಿ ಪ್ರಕರಣ ನ್ಯಾಯಾಂಗ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.