ETV Bharat / state

ಕುಂದಗೋಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ: ಬಾಲ್ಯದ ದಿನಗಳನ್ನು ನೆನೆದ ಸಿಎಂ ಬೊಮ್ಮಾಯಿ.. - ಕುಂದಗೋಳಕ್ಕೂ ನನಗೂ ಅವಿನಾಭಾವ ಸಂಬಂಧವಿದೆ

''ನವಕರ್ನಾಟಕ ಅಭಿವೃದ್ಧಿ ಆಗಬೇಕಾದ್ರೆ ವಿದ್ಯುತ್, ನೀರು, ಸಾಮಾಜಿಕ ನ್ಯಾಯ ಬೇಕು. ಅದನ್ನು ಬಿಜೆಪಿ ಅನುಷ್ಠಾನ ಮಾಡುತ್ತಿದೆ. ರೈತ ಖಾತೆಗೆ ನೆರವಾಗಿ ಪರಿಹಾರ ನೀಡಿದ್ದೇವೆ. ಸುಖ ಸಂಸಾರಕ್ಕೆ ಬೇಕಾಗುವ ಸೌಲಭ್ಯ ಒದಗಿಸಲು‌ ಬರುವ ದಿನಗಳಲ್ಲಿ ಬಿಜೆಪಿಗೆ ಮತ ನೀಡಬೇಕು'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

CM Basavaraja Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
author img

By

Published : May 2, 2023, 6:08 PM IST

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು.

ಹುಬ್ಬಳ್ಳಿ: ''ಕುಂದಗೋಳಕ್ಕೆ ಬಂದಾಗ ನಾನು ಬಹಳ ಭಾವನಾತ್ಮಕ ಆಗುತ್ತೇನೆ. ನನ್ನ ಬೇಸಿಗೆ ರಜೆಯನ್ನು ಕುಂದಗೋಳ ಸಂಶಿ, ಕಮಡೊಳ್ಳಿಯಲ್ಲಿ ಕಳೆದಿರುವೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ಪರ ರೋಡ್ ಶೋ ವೇಳೆ ಮಾತನಾಡಿದ ಅವರು, ''ನಮ್ಮ ತಂದೆ ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರು. ರೈತ ಪರವಾಗಿ ಕೆಲಸ ಮಾಡಿಸಿದ್ರು, ಚಕ್ಕಡಿ ಬುತ್ತಿ‌ ಕಟ್ಟಿಕೊಂಡು ಹೋಗಿ ಪ್ರಚಾರ ಮಾಡಿದ್ದ ನಮ್ಮ ತಂದೆ ಅವರನ್ನು 10 ಸಾವಿರ ಅಂತರದಿಂದ ಗೆಲ್ಲಿಸಿದ್ರಿ. ಈ ತಾಲೂಕಿನೊಂದಿಗೆ ನನಗೆ ಅವಿನಾಭಾವ ಸಂಬಂಧ ಇದೆ'' ಎಂದು ಅವರು ಹೇಳಿದರು.

''ಕಮಡೊಳ್ಳಿಯಲ್ಲಿ ಹತ್ತಿ ನೀಡಿ, ಅದಕ್ಕೆ ಪ್ರತಿಯಾಗಿ ಕರದಂಟು ತಿಂದಿರುವೆ. ಈಗ ಹತ್ತಿಯೂ ಇಲ್ಲ, ಕರದಂಟು ಕೂಡ ಇಲ್ಲ. ಇದೆಲ್ಲವೂ ಈಗ ನೆನಪು ಆಗುತ್ತಿದೆ. ಮುಂದಿನ ವರ್ಷದಿಂದ ಮೆಣಸಿನಕಾಯಿ ಟೆಂಡರ್ ಕುಂದಗೋಳದಲ್ಲಿ ಮಾಡ್ತೇವಿ. ಈ ಚುನಾವಣೆಯಲ್ಲಿ ದೇಶದ ಅಭಿವೃದ್ಧಿ, ದೇಶ ಭಕ್ತಿ, ಕರ್ನಾಟಕ ಅಭಿವೃದ್ಧಿ ಮೇಲೆ ಮತ‌ ಕೇಳುತ್ತಿದ್ದೇವೆ'' ಎಂದರು.

ರಾಜ್ಯದ ಅಭವೃದ್ಧಿಗೆ ಬಿಜೆಪಿಗೆ ಮತ ನೀಡಿ-ಸಿಎಂ ಬೊಮ್ಮಾಯಿ: ''ನವಕರ್ನಾಟಕ ಅಭಿವೃದ್ಧಿ ಆಗಬೇಕಾದ್ರೆ ಆಸೆ ಆಮಿಷ ತೋರಿಸಿ, ಸಮಾಜ ಒಡೆದು ದೇಶ ದ್ರೋಹಿಗಳ ಸಂಘಟನೆಗೆ ಸಹಾನುಭೂತಿ ತೋರಿಸುವ ಕಾಂಗ್ರೆಸ್ ಮತ್ತೊಂದು ಕಡೆ ಇದೆ. ನವಕರ್ನಾಟಕ ಅಭಿವೃದ್ಧಿ ಆಗಬೇಕಾದ್ರೆ ವಿದ್ಯುತ್, ನೀರು, ಸಾಮಾಜಿಕ ನ್ಯಾಯ ಬೇಕು. ಅದನ್ನು ಬಿಜೆಪಿ ಮಾಡ್ತಿದೆ. ರೈತ ಖಾತೆಗೆ ನೆರವಾಗಿ ಪರಿಹಾರ ನೀಡಿದ್ದೇವೆ. ಸುಖ ಸಂಸಾರಕ್ಕೆ ಬೇಕಾಗುವ ಸೌಲಭ್ಯ ಒದಗಿಸಲು‌ ಬರುವ ದಿನಗಳಲ್ಲಿ ಬಿಜೆಪಿಗೆ ಮತ ನೀಡಬೇಕು'' ಎಂದು ಮನವಿ ಮಾಡಿದರು.

''ಕುಂದಗೋಳ ಇಪ್ಪತ್ತು ವರ್ಷದಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ನಾನು ಮುಖ್ಯಮಂತ್ರಿ ಆದ್ಮೇಲೆ ಪಕ್ಷಭೇದ ಮರೆತು ಅಭಿವೃದ್ಧಿಗೆ ಹಣ ನೀಡಿದ್ದೇನೆ. ವಿರೋಧ ಪಕ್ಷದ ಶಾಸಕರಿಗೆ ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರಿಗಾಗಿ 25 ಕೋಟಿ ಅನುದಾನ ಕೊಡಲಾಗಿದೆ. ಕಾಂಗ್ರೆಸ್ ನಮಗೆ ಬಿಡಿ ಕಾಸು ಕೊಡಲಿಲ್ಲ. ಇದು ನನ್ನ ತಾಲೂಕು ಇದಕ್ಕೆ ಏನು‌ ಕಡಿಮೆ ಮಾಡಬೇಡ ಅಂತಾ ಸಿಸಿ ಪಾಟೀಲಗೆ ಹೇಳಿದ್ದೆ. ಶಾಸಕ ಇಲ್ಲದಿದ್ದರೂ ಎಂ.ಆರ್.ಪಾಟೀಲ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಎಂ.ಆರ್.ಪಾಟೀಲಗೆ ಹೇಂಗ ಕೆಲಸ ತರಬೇಕು ಅಂತಾ ಗೊತ್ತಿದೆ. ಪ್ರಹ್ಲಾದ್ ಜೋಶಿ ಆಶೀರ್ವಾದ, ಸಿ.ಸಿ.ಪಾಟೀಲ, ನನ್ನ ಬೆಂಬಲ ಇದೆ'' ಎಂದು ತಿಳಿಸಿದರು.

ಮೇ 10ರವರೆಗೆ ಗ್ಯಾರೆಂಟಿ ನಂತರ ಅವು ಗಳಗಂಟಿ- ಸಿಎಂ ಬೊಮ್ಮಾಯಿ ''ಇವತ್ತು ಕಾಂಗ್ರೆಸ್ ಗ್ಯಾರೆಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ್ರು. ಹತ್ತು ಕೆಜಿ ಅಕ್ಕಿ ಕೊಡ್ತೇವೆ'' ಎಂದು ಹೇಳಿದ ಸಿಎಂ ಬೊಮ್ಮಾಯಿ, ''ಅನ್ನಭಾಗ್ಯ ಹೆಸರಿನಲ್ಲಿ ಬ್ಲ್ಯಾಕ್ ಮಾರ್ಕೆಟ್​ನಲ್ಲಿ ಅಕ್ಕಿ ಮಾರಾಟ ಮಾಡಿದ್ದಾರೆ. 75 ಯೂನಿಟ್ ವಿದ್ಯುತ್ ನಾವು ಕೊಟ್ಮಲೇ 200 ಕೊಡ್ತೇವಿ ಅಂತಿದ್ದಾರೆ. ಇವೆಲ್ಲ ಮೇ 10ರವರೆಗೆ ಗ್ಯಾರೆಂಟಿ ನಂತರ ಅವು ಗಳಗಂಟಿ ಆಗಲಿವೆ'' ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪ್ರಣಾಳಿಕೆ 'ದಗಾಬಾಜಿ‌' ಪ್ರಣಾಳಿಕೆ- ಸಿಎಂ ಬೊಮ್ಮಾಯಿ: ಕಾಂಗ್ರೆಸ್ ಪ್ರಣಾಳಿಕೆ 'ದಗಾಬಾಜಿ‌' ಪ್ರಣಾಳಿಕೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಅನೋ ಹುನ್ನಾರ ಇದೆ‌. ಇದಕ್ಕೆ ನೀವು ಅವಕಾಶ ಕೊಡಬೇಡಿ. ಪ್ರಾಮಾಣಿಕ ಎಂ.ಆರ್.ಪಾಟೀಲ ಅವರನ್ನು ಆಯ್ಕೆ ಮಾಡಬೇಕು. ಎಲ್ಲರನ್ನೂ ಪರೀಕ್ಷೆ ಮಾಡಿದ್ರಿ ಇವರನ್ನೊಮ್ಮೆ ಆಯ್ಕೆ ಮಾಡಿ'' ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಾರಿಗೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆ-ಪ್ರಹ್ಲಾದ್ ಜೋಶಿ: ''ಕಾಂಗ್ರೆಸ್ ಜಾರಿಗೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆ, ಅದರಲ್ಲಿ ಆಕಾಶ ಮತ್ತು ಪಾತಾಳವನ್ನು ಒಂದು ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೋಡಿದ್ರೆ ಇವರು 40 ವರ್ಷ ಅಧಿಕಾರ ಮಾಡಿದ್ದಾರೆ. ಆದರೆ, ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬುದು ಅರಿವಾಗುತ್ತದೆ. ದೂರಾಡಳಿತ ಮಾಡಿ ಚುನಾವಣೆ ಹತ್ತಿರ ಬಂದಾಗ ಜನರಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತದೆ. ರೈತರು, ದಲಿತರ ಹೆಸರಿನಲ್ಲಿ ಪುಂಕಾನುಪುಂಕವಾಗಿ ಸುಳ್ಳು ಹೇಳುತ್ತದೆ'' ಎಂದು ಹರಿಹಾಯ್ದರು.

ಕಾಂಗ್ರೆಸ್ ಮತಬ್ಯಾಂಕ್​ಗಾಗಿ ರಾಜಕೀಯ- ಜೋಶಿ ಆರೋಪ: ''ಈ ಹಿಂದೆ ಉತ್ತರಖಂಡದಲ್ಲಿ ಸಹ ಇದೇ ತರಹ ಕಾಂಗ್ರೆಸ್ ಸುಳ್ಳು ಭರವಸೆ ನೀಡಿತ್ತು. ಅದರೆ ಅಲ್ಲಿನ ಜನರು ಸೊಪ್ಪು ಹಾಕದೇ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕೂಡ ಜನರು ಕಾಂಗ್ರೆಸ್​ನ ಸುಳ್ಳು ಭರವಸೆಯನ್ನು ಜನರು ನಂಬೋದಿಲ್ಲ'' ಎಂದರು. ''ಇದೀಗ ಮುಸ್ಲಿಂ ಮೀಸಲಾತಿ ತರತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಮುಸ್ಲಿಂ ಮೀಸಲಾತಿ ಜಾರಿಗೆ ತರೋದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ಕೂಡಾ ಕಾಂಗ್ರೆಸ್ ಮತಬ್ಯಾಂಕ್​ಗಾಗಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಒಂದು ವೇಳೆ ಬಂದಲ್ಲಿ ಮುಸ್ಲಿಂ ಮೀಸಲಾತಿ ಜಾರಿಗೆ ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ'' ಎಂದು ಗರಂ ಆದರು.

ಕಾಂಗ್ರೆಸ್​ ವಿರುದ್ಧ ಜೋಶಿ ಗರಂ: ''ಮುಸ್ಲಿಂ ಮೀಸಲಾತಿ ಜಾರಿ ಮಾಡೋದು ಹಿಂದೂಗಳಿಗೆ ಅಪಮಾನ ಮಾಡಿದಂತೆ. ಇದೀಗ ಕಾಂಗ್ರೆಸ್ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದೆ. ಈ ಹಿಂದೆ ಪಿಎಫ್ಐ ಅನ್ನು ಬ್ಯಾಗ್ ಮಾಡಿದಕ್ಕೆ ಇದೀಗ ಕಾಂಗ್ರೆಸ್ ತುಷ್ಟಿಕರಣ ಕಾಜಕಾರಣಕ್ಕಾಗಿ ಆರ್.ಎಸ್.ಎಸ್, ಬಜರಂಗದಳವನ್ನು ನಿಷೇಧ ಮಾಡುವುದಾಗಿ ಘೋಷಣೆ ಮಾಡಿದೆ. ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಕೇಳಲು ಇಚ್ಛೆ ಪಡುವೆ ದೇಶವನ್ನು ಏನೂ ಮಾಡಲು ಹೊರಟ್ಟೀದೀರಿ ಎಂದು ಪ್ರಶ್ನಿಸಿದರು. ''ಇದು ತುಷ್ಟಿಕರಣದ ಪರಾಕಾಷ್ಠೆ, ಕಾಂಗ್ರೆಸ್ ಪಕ್ಷದ ದೋರಣೆ ನೋಡಿದರೇ ಅವರ ಪಕ್ಷ ಭಯೋತ್ಪಾದನೆ ಪರವಾಗಿ ಇದೆ ಎಂಬುದು ಸಾಬೀತಾಗಿದೆ. ಸದ್ಯ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಮ್ಯಾನಿಫ್ಯಾಸ್ಟೋ ಇರಬಹುದು ಎಂಬ ಅನುಮಾನ ಮೂಡುತ್ತಿದೆ'' ಎಂದು ಕಿಡಿಕಾರಿದರು.

ಇದನ್ನೂ ಓದಿ: ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಲ್ಲ, ಭ್ರಷ್ಟ ಸರ್ಕಾರ: ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್​ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.