ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಡವರ ಫ್ರಿಡ್ಜ್ ಎಂದೇ ಬಣ್ಣಿಸಲ್ಪಡುವ ಮಣ್ಣಿನ ಮಡಿಕೆಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಮಡಿಕೆಗೆ ಸುಮಾರು 250 ರಿಂದ 350 ರೂ. ಗಳವರೆಗೆ ಮಡಿಕೆಗಳು ದೊರೆಯುತ್ತಿವೆ. ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು ಎಂದು ಗ್ರಾಹಕರು ಹೇಳುತ್ತಾರೆ.