ಹುಬ್ಬಳ್ಳಿ : ಸಿಎಎ, ಎನ್ಆರ್ಸಿ, ಎನ್ಪಿಆರ್ ಗಳನ್ನು ಹಿಂಪಡೆಯಯ ಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರ ಸಂಘದಿಂದ ಪ್ರತಿಭಟನೆ ನಡೆಸಿದರು.
ಪೌರತ್ವ ಕಾಯಿದೆ ವಿರೋಧಿಸಿ ಪೌರ ಕಾರ್ಮಿಕರು ತಮಟೆ ಹೊಡೆಯುವುದರ ಮೂಲಕ ಪೌರತ್ವ ಕಾಯಿದೆಗೆ ದಿಕ್ಕಾರ ಕೂಗುತ್ತಾ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ಹಾದು ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಡಾ. ವಿಜಯ ಎಮ್ ಗುಂಟ್ರಾಳ, ಎ.ಎಮ್ ಹಿಂಡಸಗೇರಿ ಸೇರಿದಂತೆ ಹಲವಾರು ಜನ ಪೌರ ಕಾರ್ಮಿಕರು ಭಾಗಿಯಾಗಿದ್ದರು.