ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದಷ್ಟೇ ಹು -ಧಾ ಮಹಾನಗರ ಪಾಲಿಕೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದ್ದ ಹಿನ್ನೆಲೆಯಲ್ಲಿ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಪಾಲಿಕೆ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಕಳಪೆ ಕಾಮಗಾರಿ ಹಾಗೂ ನಿರ್ಲಕ್ಷ್ಯದಿಂದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಅವರಿಗೆ ಅಗೌರವ ಮಾಡಿದಂತಾಗಿದೆ. ಇನ್ನೂ ಪ್ಲಾಸ್ಟರ್ ಕೂಡ ಮಾಡಿಲ್ಲ ಇಂತಹ ಪರಿಸ್ಥಿತಿಯಲ್ಲಿಯೇ ಮೂರ್ತಿ ಭಗ್ನವಾಗಿರುವುದನ್ನು ನೋಡಿದರೆ ನಿಜಕ್ಕೂ ಪಾಲಿಕೆ ಕಾಮಗಾರಿ ಹಾಗೂ ಅಧಿಕಾರಿಗಳ ನಡೆ ನೋಡಿದರೇ ನಾಚಿಕೆ ಆಗುತ್ತದೆ ಎಂದರು.
ನೂರು ದಿನಗಳಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡದಿದ್ದರೆ 101 ದಿನದಂದು ಶಿವಾಜಿ ಅವರ ಖಡ್ಗ ತರಬೇಕಾಗುತ್ತದೆ ಎಂದು ಅಧಿಕಾರಿಗಳಿಗ ಎಚ್ಚರಿಕೆ ನೀಡಿದರು. ಅತಿ ಹೆಚ್ಚಿನ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ವ್ಯವಸ್ಥೆ ನೋಡಬೇಕೆಂದರೇ ಪಾಲಿಕೆ ಆವರಣಕ್ಕೆ ಬಂದು ನೋಡಬೇಕು. ನೀವು ದುಡ್ಡು ತಿನ್ನುತ್ತಿದ್ದೀರಾ ನಿಜ ಆದರೇ ದೇಶವನ್ನು ಉಳಿಸಿದಂತ ಮಹಾನ ಹೋರಾಟಗಾರ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಕೂಡ ಹಣ ತಿನ್ನುತ್ತಿದ್ದೀರಾ ಅಂದರೆ ನಿಮ್ಮ ತಾಯಿಯನ್ನು ಮಾರಿಕೊಂಡು ನೀವು ಹಣವನ್ನು ತಿಂದಿದ್ದೀರಾ ಅಂತ ಅರ್ಥ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ : ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರಲ್ಲ, ನಮಗೂ ವಕೀಲರಿದ್ದಾರೆ; ರಮೇಶ ಜಾರಕಿಹೊಳಿ
ಕಟ್ಟಿಸಿಕೊಡುತ್ತೇವೆ, ಮಾಡುತ್ತೇವೆ ಎಂಬುವಂತ ಹಾರಿಕೆ ಉತ್ತರವನ್ನು ನೀಡುವುದನ್ನು ಬಿಟ್ಟು ನೂರು ದಿನಗಳ ಒಳಗೆ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಇಲ್ಲವಾದರೆ ನೂರಾ ಒಂದನೇ ದಿನಕ್ಕೆ ಶಿವಾಜಿ ಖಡ್ಗ ತರುವುದಾಗಿ ಖಡಕ್ ಎಚ್ಚರಿಕೆ ನೀಡಿದರು.