ಹುಬ್ಬಳ್ಳಿ: ನಗರದ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ‘ಸಮೃದ್ಧ ಭಾರತ’ ಘೋಷವಾಕ್ಯದೊಂದಿಗೆ ಮೂರು ಅಡಿ ಎತ್ತರದ ಚರಕ ಪ್ರತಿಷ್ಠಾಪಿಸಲಾಗಿದೆ. ಈ ಚರಕದಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ‘ಮೈ ಲೈಫ್ ಈಸ್ ಮೈ ಮೆಸೇಜ್’ ಎಂಬ ಸಂದೇಶ ಬರೆಯಲಾಗಿದೆ.
ಚರಕವನ್ನು ಎಸ್. ಸಿ. ಶೆಟ್ಟರ್ ಮತ್ತು ಸನ್ಸ್ ಪ್ರಾಯೋಜಿಸಿದ್ದು, ಹುಬ್ಬಳ್ಳಿಯ ಆರ್ಟ್‌ವಾಲಿ ಎಂಬವರು ತಯಾರಿಸಿದ್ದಾರೆ.
ರೈಲು ನಿಲ್ದಾಣ ಸುಂದರವಾಗಿ ಕಾಣುವಂತೆ ಮಾಡಲು ಮತ್ತು ಪರಿಸರ ಸ್ನೇಹಿಯಾಗಿ ರೂಪಿಸಲು ಶ್ರಮಿಸುತ್ತಿದ್ದೇವೆ. ಚಿತ್ರಗಳು ಪ್ರಯಾಣಿಕರ ಆಕರ್ಷಣೆಗಷ್ಟೇ ಅಲ್ಲದೇ, ಮಾನವನಿಗೆ ತ್ಯಾಗದ ಸಂದೇಶ ನೀಡುತ್ತವೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ತಿಳಿಸಿದ್ದಾರೆ.