ಹುಬ್ಬಳ್ಳಿ: ಸದಾ ಒಂದಲ್ಲೊಂದು ಯಡವಟ್ಟಿನಿಂದ ಕಿಮ್ಸ್ ಆಸ್ಪತ್ರೆ ಸುದ್ದಿಯಲ್ಲಿರುತ್ತೆ. ಹೌದು, ಈಗ ಮತ್ತೆ ಅಂತಹದ್ದೇ ಯಡವಟ್ಟಿನಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕಿಮ್ಸ್‌ನ 702ನೇ ವಾರ್ಡಿನಲ್ಲಿ ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳು ವಿಶ್ರಾಂತಿ ತೆಗೆದುಕೊಂಡು, ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಹಾಗೂ ಪೋಟೋಗಳು ವೈರಲ್ ಆಗಿವೆ. ಇದರಿಂದ ಕಿಮ್ಸ್ ಆಡಳಿತವು ಸಾರ್ವಜನಿಕರ ಕೆಂಗಣ್ಣಿಗೆ ಒಳಗಾಬೇಕಾಗಿದೆ.
ಒಂದೇ ಬೆಡ್‌ನಲ್ಲಿ ಮಹಿಳೆಯರಿಬ್ಬರು ನರಳುತ್ತ ಮಲಗಿರುವುದು ದೃಶ್ಯ ಮೈಜುಂ ಎನ್ನುವಂತೆ ಮಾಡುತ್ತದೆ. ಪರಸ್ಪರ ವಿರುದ್ಧವಾಗಿ ಬೆಡ್ ನಲ್ಲಿ ಮಲಗಿರುವುದು ಕಂಡುಬರುತ್ತದೆ. ಒಂದೇ ಬೆಡ್‌ನಲ್ಲಿ ಮಹಿಳೆಯು ವೃದ್ಧೆ ತಲೆ ಬಳಿ ಕಾಲು ಇಟ್ಟು ಮಲಗಿದರೆ, ವೃದ್ಧೆಯು ಅದಕ್ಕೆ ವಿರುದ್ಧವಾಗಿ ನರಳಾಡುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಬ್ಬರು ಇನ್ನೊಬ್ಬರನ್ನು ಸರಿಸದೇ ಇರುವಂತ ಪರಿಸ್ಥಿತಿ ಇಲ್ಲಿದೆ. ಸ್ವಲ್ಪ ಆಚೀಚೆ ಆದ್ರೂ ನೆಲಕ್ಕೆ ಬೀಳವ ಸ್ಥಿತಿಯಿದೆ. ಈ ಆತಂಕದಲ್ಲಿಯೇ ಮೈ ಬಿಗಿ ಹಿಡಿದುಕೊಂಡು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ದುಃಸ್ಥಿತಿ ಕಿಮ್ಸ್ನಲ್ಲಿ ಇದೆ.
ಇದನ್ನೂ ಓದಿ: ಬಗೆಹರಿಯದ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ವೇತನ ಪರಿಷ್ಕರಣೆ: ನಾಳೆ ಮುಷ್ಕರಕ್ಕೆ ಕೆಪಿಟಿಸಿಎಲ್ ಸಜ್ಜು
ರೋಗಿಗಳು ನರಳಡಾವ ದೃಶ್ಯ ಕಂಡು, ಸಹ ರೋಗಿಗಳು ಸಂಬಂಧಿ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರವಾದ ಕಿಮ್ಸ್ ಆಡಳಿತ ಮಂಡಳಿ ಈ ಪ್ರಕರಣಕ್ಕೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.
''ಆ ಸಮಯದಲ್ಲಿ ಹೆಚ್ಚು ಜನ ರೋಗಿಗಳು ದಾಖಲಾದ ಹಿನ್ನೆಲೆ, ಬೆಡ್ ಅಭಾವ ಸೃಷ್ಟಿಯಾಗಿತ್ತು. ಇದರಲ್ಲಿ ನಮ್ಮ ಸಿಬ್ಬಂದಿಯದು ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿತ್ತೇವೆ'' ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ: ಏಳನೇ ಪರಿಷ್ಕೃತ ವೇತನಕ್ಕೆ ಆಗ್ರಹಿಸಿ ಸರ್ಕಾರಿ ನೌಕರರು ಇತ್ತೀಚೆಗೆ ನಡೆಸಿದ್ದ ಅನಿರ್ದಿಷ್ಟ ಮುಷ್ಕರ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡಿದ್ದರು. ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದ ಸರ್ಕಾರಿ ನೌಕರರು ಸೇವೆಯಿಂದ ದೂರ ಉಳಿದಿದ್ದರಿಂದ ಗುತ್ತಿಗೆ ಆಧಾರದ ಸಿಬ್ಬಂದಿಯಿಂದ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಓಪಿಡಿ ಸೇವೆಯನ್ನು ನೀಡಿತ್ತು. ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಕಿಮ್ಸ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕ ಮಾತ್ರ ಓಪನ್ ಆಗಿದ್ದವು. ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲ ಸಿಬ್ಬಂದಿ ತುರ್ತು ಸೇವೆ ನೀಡಿದ್ದರು. ಇದರಿಂದ ಕಿಮ್ಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ನೌಕರರ ಕೊರತೆ ಉಂಟಾಗಿತ್ತು.
ಇದನ್ನೂ ಓದಿ: ಯುಗಾದಿಗೂ ಮುನ್ನಾ ದಿನ ಕೆಎಸ್ಆರ್ಟಿಸಿ ನೌಕರರಿಂದ ಮುಷ್ಕರ: ಹಬ್ಬಕ್ಕೆ ತೆರಳುವವರಿಗೆ ತಟ್ಟಲಿದೆ ಮುಷ್ಕರದ ಬಿಸಿ