ಧಾರವಾಡ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಧಾರವಾಡಕ್ಕೆ ಭೇಟಿ ನೀಡಿದ್ದು, ಅವರನ್ನು ನೋಡಲು ಅಭಿಮಾನಿ ಬಳಗ ಮುಗಿಬಿದ್ದಿತ್ತು.
ಧಾರವಾಡದ ಹೊರವಲಯದಲ್ಲಿರುವ ವಿನಯ ಕುಲಕರ್ಣಿ ಅವರ ಡೈರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.
ನೆಚ್ಚಿನ ನಟನ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಬೇಸರ ಮಾಡದ ದರ್ಶನ್, ಕೊನೆಗೂ ಹೊರಬಂದು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.