ETV Bharat / state

ಬರಗಾಲ ಘೋಷಣೆ: ಕೇಂದ್ರ ಸರ್ಕಾರ ರೈತರನ್ನು ಗೊಂದಲಕ್ಕೀಡು ಮಾಡಿದೆ.. ಕಂದಾಯ ಸಚಿವ ಕೃಷ್ಣಬೈರೇಗೌಡ - Revenue Minister Krishnabaire Gowda

ಬರಗಾಲ ವಿಚಾರದಲ್ಲಿ ರೈತರನ್ನು ಕೇಂದ್ರ ಸರ್ಕಾರ ಗೊಂದಲಕ್ಕೀಡು ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

revenue-minister-krishnabaire-gowda
ಕಂದಾಯ ಸಚಿವ ಕೃಷ್ಣಬೈರೇಗೌಡ
author img

By ETV Bharat Karnataka Team

Published : Sep 14, 2023, 4:07 PM IST

ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿಕೆ

ಹುಬ್ಬಳ್ಳಿ : ಬರಗಾಲದ ವಿಚಾರದಲ್ಲಿ ನಮಗೆ ಯಾವ ಗೊಂದಲವೂ ಇಲ್ಲ. ರೈತರನ್ನು ಗೊಂದಲಕ್ಕೀಡು ಮಾಡಿದ್ದು ಕೇಂದ್ರ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. 195 ತಾಲೂಕುಗಳನ್ನು ಬರಪೀಡಿತವೆಂದುು ಘೋಷಿಸಿದ್ದೇವೆ. ಈ ಸಂಬಂಧ ಒಂದೂವರೆ ತಿಂಗಳಿಂದ ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ‌. ಕೇಂದ್ರ ಸರ್ಕಾರದ ಮಾನದಂಡಗಳಿಗೆ ಕೆಲ ತಾಲೂಕುಗಳು ಬರುತ್ತಿಲ್ಲ ಎಂದು ತಿಳಿಸಿದರು.

ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆಯೂ ಇಲ್ಲ‌. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ನಾವು ಮಾಡಿದ್ದೇವೆ. ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದು ಹೇಳಿದರು. ಜುಲೈ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದು ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಕೇಂದ್ರ ತನ್ನ ಪ್ರತಿಷ್ಠೆಯನ್ನು ಬಿಡಬೇಕು ಎಂದ ಸಚಿವ ಬೈರೇಗೌಡ ಆಗ್ರಹಿಸಿದರು.

ಮುಖ್ಯಮಂತ್ರಿಗಳ ಪತ್ರಕ್ಕೆ ಇನ್ನೂ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಗಳು ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡೋಕೆ ಅವಕಾಶ ಕೊಡಬೇಕು. ಈ ತಿಂಗಳ ಕೊನೆಯಲ್ಲಿ ಬರಗಾಲದ ಮಾನದಂಡ ಪರಿಶೀಲನೆ ಮಾಡುತ್ತೇವೆ ಎಂದರು.

ಕಚೇರಿಗಳಲ್ಲಿ ಪರಿಶೀಲನೆ : ಹುಬ್ಬಳ್ಳಿಯ ತಹಶೀಲ್ದಾರ್​ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದೇನೆ. ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇನೆ.‌ ಕಂದಾಯ ಇಲಾಖೆಯಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು. ಸರಿಯಾಗಿ ಕೆಲಸ ನಡೆದರೆ ಜನ ನೆಮ್ಮದಿಯಿಂದ ಇರುತ್ತಾರೆ. ಹೊಸ ಸರ್ಕಾರ ಬಂದಿದೆ. ಜನಪರ ಆಡಳಿತ ಇರಬೇಕು. ಹಳೇ ಸರ್ಕಾರ ಹೋಗಿ ಹೊಸ ಸರ್ಕಾರ ಬಂದಿದೆ. ಹಳೇ ಸರ್ಕಾರದ ತರಹ ನಾವು ಇರಬಾರದು. ಹೀಗಾಗಿ ಆಡಳಿತದಲ್ಲಿ ಬದಲಾವಣೆ ತರಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಉಪವಿಭಾಗ ಅಧಿಕಾರಿಗಳ ಹಂತದಲ್ಲಿ 32 ಸಾವಿರ ಪ್ರಕರಣ ಬಾಕಿ ಇತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಮೂರು ತಿಂಗಳಲ್ಲಿ 16 ಸಾವಿರ ಫೈಲ್ಸ್​ ವಿಲೇವಾರಿ ಮಾಡಿದ್ದೇವೆ. ಡಿಸಿ, ಎಸಿ ತಹಶೀಲ್ದಾರ್ ಹಂತದಲ್ಲಿ ಬಾಕಿ ಇರುವ ಯಾವ ಫೈಲ್ ಕೂಡಾ ಪೆಂಡಿಂಗ್ ಇರಬಾರದು ಎಂದು ಸೂಚನೆ ಕೊಟ್ಟಿದ್ದೇನೆ. ನಮ್ಮ ಕಚೇರಿಗಳಲ್ಲಿ ಕಡತ ವಿಲೇವಾರಿ ಬಹಳ ನಿಧಾನ. ಒಂದು ಕಡತ ಕಳಿಸಲು ಎರಡು ತಿಂಗಳು ತೆಗೆದುಕೊಳ್ಳುತ್ತಾರೆ. ಉತ್ತರ ಕೊಡಲು ನಾಲ್ಕು ತಿಂಗಳು ಬೇಕು. ಅಕ್ಟೋಬರ್ 1ರಿಂದ ತಹಶೀಲ್ದಾರ್​ ಹಂತದವರೆಗೂ E ಆಫೀಸ್ ಅಳವಡಿಸಿಬೇಕು‌. ಇದು ಫ್ಯಾಶನ್​ಗಾಗಿ ಅಲ್ಲ, ಕಡತ ವಿಲೇವಾರಿಗಾಗಿ ಎಂದು ಹೇಳಿದರು.

ಕೆಲವು ಕಡೆ ಜನರ ಫೈಲ್ ಕಳೆದುಹೋಗಿವೆ. ಆನ್​ಲೈನ್ ಸಿಸ್ಟಮ್​ನಲ್ಲಿ ಫೈಲ್ ಕಳೆದುಹೋಗಲು ಸಾಧ್ಯವಿಲ್ಲ. ನಾವು ಸವಾಲಾಗಿ ತಗೆದುಕೊಂಡು ಇ ಆಫೀಸ್ ಅಳವಡಿಕೆಗೆ ಮುಂದಾಗಿದ್ದೇವೆ. ಕೆಲವು ದಾಖಲೆ ಪಡೆಯುವುದು ಹರಸಾಹಸ ಆಗಿದೆ. ನಕಲಿ ದಾಖಲೆಗಳನ್ನು ತರುವುದು ವ್ಯಾಪಕವಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ : ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.