ಹುಬ್ಬಳ್ಳಿ: ರಾಜ್ಯದಲ್ಲಿ ಜೂನ್ 7ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಅಲ್ಲಿಯವರೆಗೆ ಲಾಕ್‌ಡೌನ್ ಬಗ್ಗೆ ವಿಚಾರ ಬೇಡ. ಅಲ್ಲದೇ ಕೇಂದ್ರ ಸರ್ಕಾರ ಜೂನ್ 30ರವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗುವುದು ಎಂದು ಹೇಳಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಂಟೈನ್ಮೆಂಟ್ ಝೋನ್ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಿದೆ. ಹಾಗಾಗಿ ರಾಜ್ಯದಲ್ಲಿ ಲಾಕ್‌ಡೌನ್ ಬಗ್ಗೆ ಸಿಎಂ ಚರ್ಚಿಸಿ ನಂತರ ಘೋಷಣೆ ಮಾಡುವರು ಎಂದಿದ್ದಾರೆ.
ಜಲಜೀವನ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯ 388 ಗ್ರಾಮಗಳಿಗೆ ಮುಂದಿನ ಮೂರು ವರ್ಷಗಳಲ್ಲಿ ಕುಡಿಯುವ ನೀರು ಒದಗಿಸಲಾಗುವುದು. ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಜಿಲ್ಲೆಗೆ 1032 ಕೋಟಿ ರೂ.ನಲ್ಲಿ ಜಲ ಜೀವನ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 403 ಕೋಟಿ ನೀಡಿದರೆ, 602 ಕೋಟಿ ರಾಜ್ಯ ಸರ್ಕಾರ ನೀಡಿದೆ. 423 ಕೋಟಿ ನಬಾರ್ಡ್ನಿಂದ ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಅಣ್ಣಿಗೇರಿಯನ್ನು ಹೊಸ ತಾಲೂಕು ಮಾಡಿದ ನಂತರ ಅಲ್ಲಿಯೂ ಕುಡಿಯುವ ನೀರಿಗಾಗಿ 54 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.
ಜನರು ಸಹಕರಿಸಿದರೆ ಲಾಕ್‌ಡೌನ್ ಮುಂದುವರಿಸುವ ಪ್ರಶ್ನೆ ಉದ್ಭವಿಸಲ್ಲ: ಸಿಎಂ