ಧಾರವಾಡ: ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಂಡಿದೆ.
ಆರೋಪಿಗಳಾದ ಸಂದೀಪ, ವಿನಾಯಕ ಕಟಗಿ ಮತ್ತು ಮುದುಕಪ್ಪ ಅವರನ್ನು ಸಿಬಿಐ ಅಧಿಕಾರಿಗಳು ತಮ್ಮ ವಾಹನದಲ್ಲಿ ಉಪನಗರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ ಬಳಿಕ ಆರು ಜನ ಸುಫಾರಿ ಹಂತಕರ ಪೈಕಿ ಒಬ್ಬನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.
ನಿನ್ನೆಯಿಂದ 6 ಜನ ಸುಫಾರಿ ಹಂತಕರನ್ನು ಒಂದೆಡೆ ಕೂರಿಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದರು. ಇಂದು ಮುಂಜಾನೆ ಕೂಡ ಸಿಬಿಐ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದು, ಮಧ್ಯಾಹ್ನದ ನಂತರ ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಸುಪಾರಿ ಹಂತಕರ ಜೊತೆಗೆ ಹಿಂದಿನ ಆರೋಪಿಗಳಿಗೂ ಸಹ ಸಿಬಿಐ ಅಧಿಕಾರಿಗಳು ಡ್ರಿಲ್ ನಡೆಸಲಿದ್ದಾರೆ. ಕಳೆದ ವಾರವಷ್ಟೇ ಈ ಮೂವರನ್ನು ನಿರಂತರ ನಾಲ್ಕು ದಿನ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಪುನಃ ಅದೇ ಆರೋಪಿಗಳನ್ನು ಕರೆತಂದಿರುವ ಕಾರಣ, ಮತ್ತಷ್ಟು ಟ್ವಿಸ್ಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.