ಧಾರವಾಡ : ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇಂದು ಇಡೀ ದಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತರನ್ನೇ ವಿಚಾರಣೆ ನಡೆಸಿದರು.
ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿನಯ್ ಕುಲಕರ್ಣಿ ಆಪ್ತರಾದ ಶ್ರೀವತ್ಸ, ಬಾಪುಗೌಡ ಪಾಟೀಲ್, ಆಪ್ತ ಸಹಾಯಕ ಪ್ರಶಾಂತ ಕೇಕರೆ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಅವರನ್ನು ವಿಚಾರಣೆ ನಡೆಸಿದರು.
ವಿನಯ್ ಆಪ್ತ ಸಹಾಯಕ ಪ್ರಶಾಂತ ಕೇಕರೆ ಹಾಗೂ ಆಪ್ತ ಬಾಪುಗೌಡ ಪಾಟೀಲ್ ಮಧ್ಯಾಹ್ನ ವಿಚಾರಣೆ ಮುಗಿಸಿ ಹೋಗಿದ್ದು, ಮಧ್ಯಾಹ್ನದ ನಂತರ ಕೊಲೆ ಪ್ರಕರಣದ ಆರೋಪಿ ಮಹಾಬಳೇಶ ಹೊಂಗಲ್ ಅವರನ್ನು ವಿಚಾರಣೆ ನಡೆಸಲಾಯಿತು.
ಓದಿ: ಮದುವೆ ಮಂಟಪದಿಂದಲೇ ನೇರವಾಗಿ ಬಂದ ವರನಿಂದ ನಾಮಪತ್ರ ಸಲ್ಲಿಕೆ
ಸಂಜೆ ವೇಳೆಗೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿಗೆ ಸಿಬಿಐ ಮತ್ತೊಮ್ಮೆ ಬುಲಾವ್ ನೀಡಿದೆ.