ETV Bharat / state

ಮಂಡ್ಯದ ವ್ಯಕ್ತಿಗೆ ಬಲವಂತವಾಗಿ ಮತಾಂತರ ಯತ್ನ: ಹುಬ್ಬಳ್ಳಿಯಲ್ಲಿ 12 ಮಂದಿ ವಿರುದ್ಧ ಕೇಸ್​

ವ್ಯಕ್ತಿಗೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ 12 ಮಂದಿ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

case-filled-against-11-people-over-conversion-allegation
ವ್ಯಕ್ತಿಗೆ ಬಲವಂತವಾಗಿ ಮತಾಂತರ ಯತ್ನ: ಹುಬ್ಬಳ್ಳಿಯಲ್ಲಿ 11 ಮಂದಿ ವಿರುದ್ಧ ಕೇಸ್​
author img

By

Published : Sep 25, 2022, 10:22 AM IST

Updated : Sep 25, 2022, 10:56 PM IST

ಹುಬ್ಬಳ್ಳಿ: ಮಂಡ್ಯ ಮೂಲದ ವ್ಯಕ್ತಿಯೋರ್ವರಿಗೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 12 ಮಂದಿ ವಿರುದ್ಧ ಇಲ್ಲಿನ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಕ್ಬಾಲ್, ರಫಿಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಮಂಡ್ಯದ ಶ್ರೀಧರ್​ ಎಂಬುವರು ದೂರು ನೀಡಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಶ್ರೀಧರ್​​ ಅವರನ್ನು ಬೆಂಗಳೂರಿಗೆ ಕರೆದೊಯ್ದ ಆರೋಪಿಗಳು, ಅಲ್ಲಿನ ಬನಶಂಕರಿಯಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದರು. ನಂತರ ಅವರಿಗೆ ತಮ್ಮ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದಾರೆ. ಬಲವಂತವಾಗಿ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೆ, ಮತಾಂತರದ ಬಗ್ಗೆ ಬಾಂಡ್ ಪೇಪರ್​​ನಲ್ಲಿ ಸಹಿ‌ ಪಡೆದಿದ್ದಾರೆ. ಅಲ್ಲಿಂದ ತಿರುಪತಿಗೆ ಕರೆದೊಯ್ದು, ತಮ್ಮ ಧರ್ಮದ ಪ್ರಾರ್ಥನೆ ಹಾಗೂ ಇತರ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ ಎಂದು ದೂರಲಾಗಿದೆ.

ಪ್ರತಿವರ್ಷ ಮೂವರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಬೇಕೆಂದು ಆರೋಪಿಗಳು ಶ್ರೀಧರ್​​ ಅವರಿಗೆ ಬೆದರಿಸಿದ್ದಾರೆ. ಅವರ ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೋ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯೋತ್ಪಾದಕನೆಂದು ಬಿಂಬಿಸುವುದಾಗಿ ಹೆದರಿಸಿದ್ದಾರೆ. ನಂತರ ಅವರ ಬ್ಯಾಂಕ್ ಖಾತೆಗೆ 35 ಸಾವಿರ ರೂ. ವರ್ಗಾಯಿಸಿ, ತಾವು ಹೇಳಿದಂತೆ ಕೇಳಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಶ್ರೀಧರ್​​ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಸೆ. 21ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪಕ್ಕೆ ಬಂದಾಗ, ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದರು. ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದ ಅವರು, ಈ ಹಿಂದಿನ ಘಟನೆಯಿಂದ ಬೇಸತ್ತು ನವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಪತಿ ಸೇರಿ ಇಬ್ಬರ ಬಂಧನ

Last Updated : Sep 25, 2022, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.