ಹುಬ್ಬಳ್ಳಿ: ಸಾರಿಗೆ ಮುಷ್ಕರದ ನಡುವೆಯೂ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಇಂದು 60ಕ್ಕೂ ಹೆಚ್ಚು ಬಸ್ಗಳು ಸಂಚಾರ ಮಾಡುತ್ತಿವೆ ಎಂದು ಗ್ರಾಮೀಣ ನಿಯಂತ್ರಣಾಧಿಕಾರಿ ಹೆಚ್.ರಾಮನ ಗೌಡ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿಯಿಂದ ಗದಗ, ಧಾರವಾಡ ಮತ್ತು ಶಿರಸಿ, ಬೆಳಗಾವಿ ಹಾಗೂ ಕಾರವಾರಕ್ಕೆ ಬಸ್ಸನ್ನು ಕಾರ್ಯಾಚರಣೆ ಮಾಡಲಾಗಿದೆ. ಪ್ರತಿಯೊಂದು ಗ್ರಾಮೀಣ ಪ್ರದೇಶಕ್ಕೆ ಬಸ್ಗಳ ಸಂಚಾರ ವ್ಯವಸ್ಥೆ ನೀಡುವ ಉದ್ದೇಶದಿಂದ ಸುಗಮವಾಗಿ ಸಂಚಾರ ಮಾಡಲು ಎಲ್ಲ ತರಹದ ಸಿದ್ಧತೆ ನಡೆಸಲಾಗಿದೆ ಎಂದರು.
ಬಸ್ ಕಾರ್ಯಾಚರಣೆ ಆರಂಭವಾಗಿರುವ ಹಿನ್ನೆಲೆ ಬಹಳಷ್ಟು ಸಿಬ್ಬಂದಿ ಬರುತ್ತಾರೆಂಬ ನಿರೀಕ್ಷೆಯಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದರು.
ಶಿಸ್ತು ಕ್ರಮ ಪ್ರಕ್ರಿಯೆ ಆರಂಭ
ಮುಷ್ಕರ ಕೈಬಿಟ್ಟು ಕೂಡಲೇ ಕೆಲಸಕ್ಕೆ ಬರುವಂತೆ ಸಿಬ್ಬಂದಿಗೆ ನಿರಂತರವಾಗಿ ಮನವೊಲಿಕೆ, ತಿಳಿವಳಿಕೆ, ಎಚ್ಚರಿಕೆಯ ಸೂಚನೆಗಳ ಮೂಲಕ ಹಲವಾರು ಅವಕಾಶಗಳನ್ನು ನೀಡಲಾಗಿದೆ. ಆದಾಗ್ಯೂ ಬಹುತೇಕ ನೌಕರರು ಅದರಲ್ಲೂ ಮುಖ್ಯವಾಗಿ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ ಕರ್ತವ್ಯಕ್ಕೆ ಬರುವ ಮುನ್ಸೂಚನೆ ನೀಡಿದ್ದಾರೆ ಎಂದರು.