ETV Bharat / state

ಸರ್ಕಾರದಿಂದ ಗ್ರೀನ್​​ ಸಿಗ್ನಲ್​​​: ನಾಳೆಯಿಂದ ಧಾರವಾಡದಲ್ಲಿ ಬಸ್ ಸಂಚಾರಕ್ಕೆ ಸಿದ್ಧತೆ - Dharwad

ರಾಜ್ಯ ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆ ಧಾರವಾಡದಲ್ಲಿ 100ಕ್ಕೂ ಹೆಚ್ಚು ಬಸ್​ಗಳು ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಾಳೆಯಿಂದ ಸಂಚರಿಸಲಿವೆ.

Bus service to begin in Dharwad
ನಾಳೆಯಿಂದ ಧಾರವಾಡದಲ್ಲಿ ಬಸ್ ಸಂಚಾರ ಪುನರಾರಂಭ
author img

By

Published : May 18, 2020, 4:49 PM IST

ಧಾರವಾಡ: ರಾಜ್ಯ ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆ ಧಾರವಾಡದಲ್ಲಿ ಕೂಡಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್​ಗಳನ್ನು ಹಾಕಲಾಗಿದೆ. ಬಸ್ ನಿಲ್ದಾಣದ ಹೊರ ಹೋಗುವುದಕ್ಕೆ ಮತ್ತು ಒಳ ಬರುವುದಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಸ್ ನಿಲ್ದಾಣಕ್ಕೆ ಆಗಮಿಸುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬಸ್​ಗಳು ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಾಳೆಯಿಂದ ಸಂಚರಿಸಲಿವೆ. ಒಂದು ಬಸ್​ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.