ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಇಂದಿನಿಂದ ಏಪ್ರಿಲ್ 14 ರವರೆಗೆ ವಿಶೇಷ ರೈಲುಗಳು ಓಡಿಸಲಿದೆ.
ರಾಜ್ಯದಲ್ಲಿ ಸಾರಿಗೆ ಮುಷ್ಕರ ಮುಂದುವರಿದಿದೆ. ಹೀಗಾಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ವಿಶೇಷ ರೈಲು ಸಂಚಾರ್ಕೆ ನಡೆಸಲು ನೈರುತ್ಯ ರೈಲ್ವೆ ವಲಯ ನಿರ್ಧರಿಸಿದೆ.
ಹುಬ್ಬಳ್ಳಿ - ಯಶವಂತಪುರ, ಯಶವಂತಪುರ - ವಿಜಯಪುರ, ಯಶವಂತಪುರ-ಹುಬ್ಬಳ್ಳಿ, ಮೈಸೂರು - ಬೀದರ್, ಬೀದರ್ -ಯಶವಂತಪುರ, ಕಾರವಾರ - ಯಶವಂತಪುರ, ಬೆಂಗಳೂರು-ಮೈಸೂರು ನಡುವೆ 18 ವಿಶೇಷ ರೈಲುಗಳ ಓಡಾಟ ನಡೆಸಲಿವೆ.