ಧಾರವಾಡ : ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ, ಇದು ದೇಶದ್ರೋಹಿ ಕೃತ್ಯ. ನೀವು ಸುಟ್ಟಿದ್ದು ಭಾವಚಿತ್ರವಲ್ಲ, ಭಾರತ ಮಾತೆಯನ್ನು ಸುಡುತ್ತಿದ್ದೀರಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಅವರು, ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದು ತಪ್ಪು ಎಂದು ಎಲ್ಲರೂ ಹೇಳುತಿದ್ದಾರೆ. ಇಂತಹ ಸಾವರ್ಕರ್‌ಗೆ ಅಪಮಾನ ಮಾಡಿದ್ದು ಸರಿಯಲ್ಲ. ನೀವು ನಾಲಾಯಕ್, ಅಯೋಗ್ಯರು ಈ ಕೂಡಲೇ ಕ್ಷಮೆ ಕೇಳಬೇಕು. ತಪ್ಪಾಯ್ತು ಎಂದು ಭಾರತ ಮಾತೆಗೆ ಹೇಳಬೇಕು. ಇಂದಿರಾ ಗಾಂಧಿಯವರೇ ಸಾರ್ವಕರ್ ಶ್ರೇಷ್ಠ ದೇಶಭಕ್ತ ಎಂದಿದ್ದರು. ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಆದರೆ ನೀವು ಮಾಡಿದ್ದು ತಪ್ಪು. ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ರಂಭಾಪುರಿ ಶ್ರೀ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಎಲ್ಲ ಮಠಕ್ಕೆ ಹೋಗ್ತಾರೆ. ಎಲ್ಲ ಕಡೆ ಉದ್ದ ಅಡ್ಡ ನಮಸ್ಕಾರ ಮಾಡುತ್ತಿದ್ದಾರೆ. ನಾಟಕ ಮಾಡುತ್ತಿದ್ದಾರೆ. ಇದು ರಂಭಾಪುರಿ ಶ್ರೀ, ಶೃಂಗೇರಿ ಶ್ರೀಗಳಿಗೂ ಗೊತ್ತು. ಎಲ್ಲ ಮಠಾಧೀಶರಿಗೂ ಈ ರಾಜಕಾರಣಿಗಳ ನಾಟಕ ಗೊತ್ತು.
ಸಿದ್ದರಾಮಯ್ಯ ನಾಸ್ತಿಕ. ಕುಂಕುಮ ಹಚ್ಚಿದವರನ್ನು ಕಂಡರೆ ಹೊಟ್ಟೆ ಉರಿಯುತ್ತದೆ. ನೀವು ಮತದ ದಾಹಕ್ಕಾಗಿ ಭಕ್ತಿಯಿಂದ ಅಲ್ಲ ಮಠಕ್ಕೆ ಹೋಗ್ತಿರಿ ಅಂತ ಎಲ್ಲರಿಗೂ ಗೊತ್ತು. ನಿಮ್ಮ ನಾಟಕ ಬೇಡ ನಿಮ್ಮ 60 ವರ್ಷದ ಬಣ್ಣ ಬಯಲಾಗಿದೆ. ದುರಾಡಳಿತ, ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಮತದಾರರು ನಿಮಗೆ ಮಣ್ಣು ಮುಕ್ಕಿಸುತ್ತಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ : ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಉತ್ಸವ ಆಚರಣೆ: ಪ್ರಮೋದ್ ಮುತಾಲಿಕ್