ETV Bharat / state

ಉಕ್ರೇನ್​ನಿಂದ ಜೀವಂತ ಇದ್ದವರನ್ನು ತರುವುದೇ ಕಷ್ಟ.. ಶವ‌ ತರುವುದು ಇನ್ನೂ ಕಠಿಣ: ಶಾಸಕ ಬೆಲ್ಲದ - ಉಕ್ರೇನ್​​ನಿಂದ ವಿಮಾನ

ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್​​ ಮಾಡಲು ವಿದೇಶಕ್ಕೆ ಹೋಗುತಿದ್ದಾರೆ?. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

aravind bellad
ಶಾಸಕ ಅರವಿಂದ ಬೆಲ್ಲದ
author img

By

Published : Mar 3, 2022, 3:09 PM IST

Updated : Mar 3, 2022, 3:49 PM IST

ಧಾರವಾಡ: ಉಕ್ರೇನ್​​ನಿಂದ ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗ‌ ಬೇಕಾಗುತ್ತದೆ. ಮೃತದೇಹಕ್ಕೆ ಬೇಕಾಗುವ ಜಾಗದಲ್ಲಿ ಎಂಟು ಜನರನ್ನು ತರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಯ ಮೃತದೇಹ ತರುವ ಎಲ್ಲ ಪ್ರಯತ್ನ ನಡೆದಿದೆ. ಅಲ್ಲಿ ಯುದ್ಧ ಭೂಮಿ ಇದೆ. ಜೀವಂತ ಇದ್ದವರನ್ನೇ ತರುವುದು ಕಷ್ಟ ಆಗಿದೆ. ಇನ್ನು ಮೃತದೇಹ ತರುವುದು ತುಂಬಾ ಕಠಿಣ. ಆದರೂ, ಭಾರತದ ವಿದೇಶಾಂಗ ಇಲಾಖೆಯು ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ತರಲು ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ ಎಂದು ಹೇಳಿದರು.

ಶಾಸಕ ಬೆಲ್ಲದ ಪ್ರತಿಕ್ರಿಯೆ

ಉಕ್ರೇನ್​ನಲ್ಲಿದ್ದವರು ಒತ್ತಡದಲ್ಲಿ ಇದ್ದಾರೆ. ಅಲ್ಲಿಂದ ರೊಮೇನಿಯಾಗೆ ಬಂದಿದ್ದಾರೆ. ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅಲ್ಲಿ‌ ನಮ್ಮ ವಿದೇಶಾಂಗ ಇಲಾಖೆ ಊಟ ಹಾಗೂ‌‌ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ‌ ಕೆಲಸ ಬೇಗ ಆಗಲಿದೆ. ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್​​ ಮಾಡಲು ವಿದೇಶಕ್ಕೆ ಹೋಗುತಿದ್ದಾರೆ?. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು. ನಮ್ಮಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ.‌ ಇದೊಂದು ಖಾಸಗಿ ಸಂಸ್ಥೆ. ಇವರು ಎಂಬಿಬಿಎಸ್​ ಸೀಟ್ ಅಭಾವ‌ ಸೃಷ್ಟಿ ಮಾಡಿದ್ದಾರೆ ಎಂದು ಶಾಸಕ ಬೆಲ್ಲದ ಆರೋಪಿಸಿದರು.

ಇದನ್ನೂಓದಿ: ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

ಅಲ್ಲದೇ, ಹೆಚ್ಚು ಮೆಡಿಕಲ್ ಸೀಟ್ ಕೊಡುವಂತೆ ಇಲ್ಲ. ಅದರಲ್ಲೂ ಭ್ರಷ್ಟಾಚಾರ ಇರುತ್ತೆ. ಈ ಎಂಸಿಐ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಅದಕ್ಕೆ ಇರುವ ಅಧಿಕಾರ ಕಡಿತ ಮಾಡಬೇಕು. ಬೇರೆ ರಾಷ್ಟ್ರದಂತೆಯೇ ನಮ್ಮಲ್ಲೂ ಕಡಿಮೆ ಖರ್ಚಿನಲ್ಲಿ ಮೆಡಿಕಲ್ ಯಾಕೆ ಮಾಡಬಾರದು ಎಂದು ಒತ್ತಾಯಿಸಿದರು.

Last Updated : Mar 3, 2022, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.