ETV Bharat / state

ಹುಬ್ಬಳ್ಳಿ: ರಜೆಗೆಂದು ಅಜ್ಜಿ ಮನೆಗೆ ಬಂದ ಬಾಲಕ ಶವವಾಗಿ ಪತ್ತೆ... ಹಲವು ಅನುಮಾನಗಳಿಗೆ ಎಡೆ - ETV Bharat kannada News

ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯಲ್ಲಿ ಬಾಲಕನ ಶವ ಪತ್ತೆ.

Boy body found
ಬಾಲಕನ ಶವ ಪತ್ತೆ
author img

By

Published : Mar 31, 2023, 3:37 PM IST

Updated : Mar 31, 2023, 6:21 PM IST

ಹುಬ್ಬಳ್ಳಿ: ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕನೋರ್ವ ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಿಲತ್ ನಗರದ‌ ದೊಡ್ಡಮನಿ ಮೈದಾನದಲ್ಲಿ ನಡೆದಿದೆ. 8 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಬಾಲಕನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ಮೃತ ಬಾಲಕ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ ರಜೆಕ್ಕೆಂದು ತನ್ನ ಅಜ್ಜಿಯ ಮನೆ ಇರುವ ದೊಡ್ಡಮನಿ ಮೈದಾನ ಪ್ರದೇಶಕ್ಕೆ ಬಂದಿದ್ದ. ದೊಡ್ಡಮನಿ ಮೈದಾನದಲ್ಲಿ ನದೀಂ ತಾತ ವಾಚ್ಮನ್ ಆಗಿದ್ದು, ಹಲವಾರು ದಿನಗಳಿಂದಲೂ ಇಲ್ಲಿಯೇ ವಾಸವಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ಆಟವಾಡಲು ಮನೆಯಿಂದ ಆಚೆ ಹೋಗಿದ್ದ ಬಾಲಕ ಬಳಿಕ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಬಾಲಕನ ಅಜ್ಜಿ ತಾತ ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಬಾಲಕನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ‌. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರ ನೀಡಲು ಹೋಗಿದ್ದರು.

ಇನ್ನೂ ಇಂದು ಮೈದಾನದಲ್ಲಿ ಬಹಿರ್ದೆಸೆಗೆ ಹೋದ ಸಾರ್ವಜನಿಕರು ಶವವನ್ನು ನೋಡಿ ಪೊಲೀಸರಿಗೆ ಮತ್ತು ಮನೆಯವರಿಗೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನದ ಸುಮಾರಿಗೆ ಬಾಲಕನ ಅಜ್ಜಿ ಮನೆಯ ಕೂಗಳತೆಯಲ್ಲಿನ ಮುಳ್ಳು ಕಂಠಿಯಲ್ಲಿ ಶವ ಪತ್ತೆಯಾಗಿದೆ. ಬಾಲಕ‌ನ ಮೃತ ದೇಹದ ಮೇಲೆ ಕೆಲ ಗಾಯಗಳಾಗಿವೆ. ಬಾಲಕನ ಶವ ಅರೆಬೆತ್ತಲೆಯಾಗಿ ಪತ್ತೆಯಾಗಿದೆ. ಬಾಲಕನನ್ನು ಸಲಿಂಗಕಾಮಕ್ಕೆ ಬಳಸಿಕೊಂಡು ದುಷ್ಕರ್ಮಿಗಳು ಬಳಿಕ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನೂ ಬಾಲಕನ ಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಬಾಲಕನ ಸಾವಿಗೆ ಅಸಲಿ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕ ಬಾಲಕನ ಹತ್ಯೆಗೆ ನಿಕರ ಕಾರಣ ತಿಳಿದು ಬರಬೇಕಿದೆ.

ಇನ್ನು ಈ ವೇಳೆ ಮಾತನಾಡಿದ ಡಿಸಿಪಿ ರಾಜೀವ್ ಎಂ ಅವರು, ಶವವಾಗಿ ಪತ್ತೆಯಾಗಿರುವ ಬಾಲಕನ ಮೃತದೇಹ ನೋಡಿದರೇ ಮೇಲ್ನೋಟಕ್ಕೆ ಇದು ಕೊಲೆ ಎಂಬುದು ತಿಳಿದುಬಂದಿದ್ದು, ಇದೀಗಾ ಶ್ವಾನದಳ ಮತ್ತು ಬೆರಳಚ್ಚು ತಂಡದೊಂದಿಗೆ ಪರಿಶೀಲನೆ ಮಾಡುತ್ತಿದ್ದೇವೆ. ಮೃತ ಬಾಲಕನ ತಂದೆ ಯಾವ ದೂರು ಕೊಡುತ್ತಾರೆ ಅದರ ಅನ್ವಯ ನಾವು ತನಿಖೆ ನಡೆಸಲು ಮುಂದಾಗುತ್ತೇವೆ. ಈಗಾಗಲೇ ತಂಡವೊಂದ ರಚಿಸಿ ಪ್ರಕರಣವನ್ನು ಭೇದಿಸಲು ಕಾರ್ಯ ನಿರತರಾಗಿದ್ದಾಗಿ ತಿಳಿಸಿದರು.

ಇದನ್ನೂ ಓದಿ : ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

Last Updated : Mar 31, 2023, 6:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.