ಹುಬ್ಬಳ್ಳಿ: ಗಂಧದಗುಡಿ ಸಿನಿಮಾ ನೋಡಲು ಬಂದ ಪುನೀತ್ ರಾಜ್‌ಕುಮಾರ್ ಅವರ ಪುಟ್ಟ ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ. ಈ ಘಟನೆ ನಗರದ ಸುಧಾ ಚಿತ್ರ ಮಂದಿರದ ಬಳಿ ನಡೆದಿದೆ.
ಸಿನಿಮಾ ವೀಕ್ಷಿಸಲು ಆಗಮಿಸಿದಾಗ ಅಭಿಮಾನಿಗಳು ಸಂಭ್ರಮದಿಂದ ಪಟಾಕಿ ಹಚ್ಚಿದ್ದಾರೆ. ಪಟಾಕಿಯ ಕಿಡಿ ಬಾಲಕನ ಕೈಗೆ ತಾಗಿ ರಕ್ತಸ್ರಾವವಾಗಿದೆ. ಇದರಿಂದ ಗಾಬರಿಗೊಂಡ ತಂದೆ ಸಿನಿಮಾ ನೋಡೊದು ಬಿಟ್ಟು ವಾಪಸ್ ಮನೆಗೆ ಹೋಗೋಣ ಎಂದು ಬಾಲಕನಿಗೆ ಒತ್ತಾಯಿಸಿದರು. ಆದರೆ ಬಾಲಕ ತಂದೆಯ ಮಾತು ಕೇಳದೆ ಅಳುತ್ತಲೇ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾನೆ.
ಇದನ್ನೂ ಓದಿ: ಗಂಧದಗುಡಿ ನೋಡಿ 'ಪುನೀತ'ರಾದ ಸ್ಯಾಂಡಲ್ವುಡ್ ತಾರಾ ಬಳಗ