ETV Bharat / state

ಲಡ್ಡುಮುತ್ಯಾ ಸ್ವಾಮೀಜಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ - Surashettikoppa village of Kalaghatagi

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..

Blood Donation Camp as part of Laddumuthya Swamiji's Birthday
ಲಡ್ಡುಮುತ್ಯಾ ಸ್ವಾಮೀಜಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ
author img

By

Published : Aug 2, 2020, 3:07 PM IST

ಕಲಘಟಗಿ(ಧಾರವಾಡ) : ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಶ್ರೀ ಲಡ್ಡುಮುತ್ಯಾ ಸ್ವಾಮೀಜಿ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಶ್ರೀ ಲಡ್ಡುಮುತ್ಯಾ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ರಕ್ತ ಶೇಖರಣೆಯೊಂದಿಗೆ ದಾನಿಗಳಿಗೆ, ನೆರೆದಿದ್ದವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ವಿತರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಡಾ. ಹೆಚ್ ಒ ಮೃತ್ಯುಂಜಯ, ಡಾ. ಸಂಗೊಳ್ಳಿ, ವಿ ಎಸ್‌ ಬೆಣ್ಣಿ, ಶಂಭುಲಿಂಗ ಉಪ್ಪಿನ, ಅನುಪಕುಮಾರ್‌ ಬಿಜ್ವಾಡ, ಮಹೇಶ ತೆಂಗಿನಕಾಯಿ, ಅಣ್ಣಪ್ಪ ಗೋಕಾಕ್, ಚಂದ್ರಶೇಖರ್ ಗೋಕಾಕ್, ದತ್ತಮೂರ್ತಿ ಕುಲಕರ್ಣಿ, ಈರಣ್ಣ ಹೊನ್ನಿಹಳ್ಳಿ, ಗಂಗನಗೌಡ ಮುರಳ್ಳಿ, ಮಾದೇವ ಶೀಲವಂತರ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ನೂರಾರು ಭಕ್ತರು ಭಾಗವಹಿಸಿ ರಕ್ತದಾನ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.